ADVERTISEMENT

‘ಜಾತಿ ಪದ್ಧತಿ ವಿರುದ್ಧ ಹೋರಾಡಿದ ಬಸವಣ್ಣ’

​ಪ್ರಜಾವಾಣಿ ವಾರ್ತೆ
Published 10 ಮೇ 2024, 15:39 IST
Last Updated 10 ಮೇ 2024, 15:39 IST
ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದಲ್ಲಿ ಶುಕ್ರವಾರ ಬಸವೇಶ್ವರ ಜಯಂತಿ ಕಾರ್ಯಕ್ರಮ ನಡೆಯಿತು. ಶಿವಾನಂದ ಸ್ವಾಮಿ ಹಾಗೂ ಪ್ರಮುಖರು ಭಾಗವಹಿಸಿದ್ದರು
ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದಲ್ಲಿ ಶುಕ್ರವಾರ ಬಸವೇಶ್ವರ ಜಯಂತಿ ಕಾರ್ಯಕ್ರಮ ನಡೆಯಿತು. ಶಿವಾನಂದ ಸ್ವಾಮಿ ಹಾಗೂ ಪ್ರಮುಖರು ಭಾಗವಹಿಸಿದ್ದರು   

ಕುಂದಗೋಳ: ಬಸವಣ್ಣನ ತತ್ವ, ಜೀವನ ನಮಗೆಲ್ಲ ಮಾದರಿ. ವಚನ ಚಳವಳಿ ಮೂಲಕ ಸಮಾಜದ ಡೊಂಕನ್ನು ತಿದ್ದಿದ ಮೊದಲಿಗ ಬಸವಣ್ಣ. ಅವರು ಅಂದು ರಚಿಸಿದ ಅನುಭವ ಮಂಟಪವೇ ನಮ್ಮ ಇಂದಿನ ಸಂಸತ್ತಿನ ನಿರ್ಮಾಣಕ್ಕೆ ಸ್ಪೂರ್ತಿ ಎಂದು ಶಿವಾನಂದ ಸ್ವಾಮಿ ಹೇಳಿದರು.

ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದಲ್ಲಿ ಶುಕ್ರವಾರ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ಸಮಾಜದ ಎಲ್ಲ ವರ್ಗದವರನ್ನು ಸಮಾನ ದೃಷ್ಠಿಯಿಂದ ಕಂಡರು. ಜಾತಿ ಪದ್ದತಿ ವಿರುದ್ಧ ಹೋರಾಡಿದರು. ವಚನಗಳು, ಅನುಭವ ಮಂಟಪದ ಮೂಲಕ ಜಗತ್ತಿಗೆ ಏಕತೆಯ ಸಂದೇಶ ಸಾರಿದರು ಎಂದರು.

ಚಾರ್ಯ ಜೆ.ಎನ್ ಅರಿಕಟ್ಟಿ, ಕಾರ್ಯದರ್ಶಿ ವೈ.ಎಸ್ ಮೇಗುಂಡಿ, ಸಹ ಪ್ರಾಧ್ಯಾಪಕರಾದ ಎಂ.ಎಂ ಬುಡಶೆಟ್ಟಿ, ಎಂ.ಸಿ ಶಿಗ್ಲಿ, ಎಂ.ಜಿ ನದಾಫ, ಮುತ್ತು ಭಜಂತ್ರಿ, ಎಂ.ಜಿ ಅಂಗಡಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.