ADVERTISEMENT

ವಚನ ಸಾಹಿತ್ಯ ಬದುಕಿಗೆ ದಾರಿದೀಪ: ಸ್ಟೀವ್ ರೋಚ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 6:05 IST
Last Updated 1 ಸೆಪ್ಟೆಂಬರ್ 2025, 6:05 IST
ಧಾರವಾಡದ ಮೃತ್ಯುಂಜಯ ವಿದ್ಯಾಲಯ ನಡೆದ ವಿಚಾರ ಸಂಕಿರಣವನ್ನು ಅರವಿಂದ ಜತ್ತಿ ಉದ್ಘಾಟಿಸಿದರು
ಧಾರವಾಡದ ಮೃತ್ಯುಂಜಯ ವಿದ್ಯಾಲಯ ನಡೆದ ವಿಚಾರ ಸಂಕಿರಣವನ್ನು ಅರವಿಂದ ಜತ್ತಿ ಉದ್ಘಾಟಿಸಿದರು   

ಧಾರವಾಡ: ‘ವಚನಗಳು ಬದುಕಿಗೆ ದಾರಿದೀಪವಾಗಿವೆ. ಕಾಯಕ, ಸಮಾನತೆ, ಮಾನವೀಯತೆ, ಶ್ರದ್ಧೆ ಮತ್ತು ಆತ್ಮೀಯತೆ ಇವು ಬಸವಣ್ಣನವರ ತತ್ವಗಳು’ ಎಂದ ಉತ್ತರ ಅಮೆರಿಕದ ಬಸವ ಕೇಂದ್ರದ ಅಧ್ಯಕ್ಷ ಸ್ಟೀವ್ ರೋಚ್ ಹೇಳಿದರು.

ಬೆಂಗಳೂರಿನ ಬಸವ ಸಮಿತಿ, ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ, ಅಕ್ಕನ ಅರಿವು, ಪುಣೆಯ ವಚನ ಅಧ್ಯಯನ ವೇದಿಕೆ, ಸತಾರದ ಇತಿಹಾಸ ಸಂಶೋಧನ ಮಂಡಲ ಹಾಗೂ ನಗರದ ಬಸವ ಕೇಂದ್ರ ವತಿಯಿಂದ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ‘ವಚನ ಸಾಹಿತ್ಯದ ಸಾಮಾಜಿಕ ರಾಜಕೀಯ ನಿಲುವುಗಳ ಪ್ರಸ್ತುತತೆ’ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಬಸವಣ್ಣನವರು 12ನೇ ಶತಮಾನದಲ್ಲಿ ‘ಕಾಯಕವೇ ಕೈಲಾಸ’ ತತ್ವವನ್ನು ಸಾರಿದರು. ‘ಅನುಭವ ಮಂಟಪ’ ಸ್ಥಾಪಿಸಿದರು. ಅವರು ಸಾಂಸ್ಕೃತಿಕ ರಾಯಭಾರಿ. ಅವರ ಕಾಯಕ, ಅನುಭವ ಮಂಟಪ, ದಾಸೋಹಗಳು ಕನ್ನಡಿಗರಿಗೆ ಜೀವನ ಮಾರ್ಗವಾಗಿವೆ’ ಎಂದರು.

ADVERTISEMENT

ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ‘ಬಸವಣ್ಣನವರು ವಿಶ್ವ ಭ್ರಾತೃತ್ವವನ್ನು ಬಿತ್ತಿದವರು. ವಚನ ಎಂದರೆ ಅನುಭವ ಮತ್ತು ಅನುಭಾವದ ಸಮ್ಮಿಲನ’ ಎಂದರು.

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಹಾಂತೇಶ ಎಂ. ಕವಟಗಿಮಠ ಅಧ್ಯಕ್ಷತೆ ವಹಿಸಿದ್ದರು. ಬಸವ ತಿಳಿವಳಿಕೆ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಶಶಿಕಾಂತ ಪಟ್ಟಣ, ಎಂ.ಎಂ.ಕಲಬುರ್ಗಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ವೀರಣ್ಣ ರಾಜೂರ, ಪ್ರಾಚಾರ್ಯೆ ನೀಲಕ್ಕ ಸಿ. ಪಾಟೀಲ, ವೀಣಾ ಹೂಗಾರ, ಪ್ರೊ.ಎಸ್.ಎಸ್.ಸಂಗೊಳ್ಳಿ, ಪ್ರೊ. ಶಶಾಂಕ ಹಾದಿಮನಿ, ಪ್ರೊ.ನಾಗರಾಜ ಎಂ.ಕೋಟಗಾರ, ಪ್ರೊ.ಉಮೇಶ ನೀಲಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.