ಹುಬ್ಬಳ್ಳಿ: ಒಮನ್ ದೇಶದ ಮಸ್ಕತ್‌ನ ಮಜಾನ್ ಹೈಟ್ಸ್ ಸಭಾಂಗಣದಲ್ಲಿ ಏಪ್ರಿಲ್ 18ರಂದು ನಡೆಯುವ ‘ಮಸ್ಕತ್ ಗಡಿನಾಡ ಉತ್ಸವ’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಪಾಲ್ಗೊಳ್ಳುವರು.
ಗಡಿನಾಡ ಸಾಹಿತ್ಯ–ಸಾಂಸ್ಕೃತಿಕ ಅಕಾಡೆಮಿಯ ಒಮನ್ ಘಟಕ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಒಮನ್ ವಿವಿಧ ಕನ್ನಡಪರ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಒಮನ್ ದೇಶದ ಪ್ರವಾಸದಲ್ಲಿರುವ ಬಸವರಾಜ ಹೊರಟ್ಟಿ ಅವರು ಅಲ್ಲಿನ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಚೇರಿಗೆ ಭೇಟಿ ನೀಡಿದರು. ಅಧ್ಯಕ್ಷ ಶೈಖ್ ಫೈಝಲ್ ಅಬ್ದುಲ್ಲ ಅಲ್ ರವಾಸ್ ಅವರೊಂದಿಗೆ ಮಾತುಕತೆ ನಡೆಸಿದರು. ಆರ್ಥಿಕ ತಜ್ಞ ಎನ್. ರಮಾನಂದ ಪ್ರಭು, ಗಡಿನಾಡ ಸಾಹಿತ್ಯ–ಸಾಂಸ್ಕೃತಿಕ ಅಕಾಡೆಮಿಯ ಒಮನ್ ಘಟಕದ ಅಧ್ಯಕ್ಷ ಅಬೂಬಕರ್ ರೋಯಲ್ ಬೊಳ್ಳರ್, ಹೊರಟ್ಟಿ ಅವರ ಆಪ್ತ ಕಾರ್ಯದರ್ಶಿ ವಿಶ್ವನಾಥ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.