ADVERTISEMENT

ಕ್ಲಾರ್ಕ್ಸ್‌ ಇನ್ ಹೋಟೆಲ್: ಬಂಗಾಳಿ ಆಹಾರ ಮೇಳ ಆರಂಭ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:04 IST
Last Updated 19 ಅಕ್ಟೋಬರ್ 2018, 19:04 IST
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕ್ಲಾರ್ಕ್ಸ್‌ ಇನ್ ಹೋಟೆಲ್‌ನಲ್ಲಿ ಆರಂಭವಾದ ಬೆಂಗಾಳಿ ಆಹಾರ ಮೇಳದಲ್ಲಿದ್ದ ಬಗೆ ಬಗೆಯ ಖಾದ್ಯಗಳು. ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕ್ಲಾರ್ಕ್ಸ್‌ ಇನ್ ಹೋಟೆಲ್‌ನಲ್ಲಿ ಆರಂಭವಾದ ಬೆಂಗಾಳಿ ಆಹಾರ ಮೇಳದಲ್ಲಿದ್ದ ಬಗೆ ಬಗೆಯ ಖಾದ್ಯಗಳು. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಕ್ಲಾರ್ಕ್ಸ್‌ ಇನ್ ಹೋಟೆಲ್‌ನಲ್ಲಿ ಬೆಂಗಾಳಿ ಆಹಾರ ಮೇಳ ಶುಕ್ರವಾರ ಆರಂಭವಾಯಿತು. ಸೂಪ್, ಸಲಾಡ್ಸ್‌, ಚಾಟ್, ಸ್ಟಾರ್ಟರ್, ಮೇನ್ ಕೋರ್ಸ್ ಹಾಗೂ ಸಿಹಿ ತಿಂಡಿಗಳನ್ನು ಒಳಗೊಂಡ ಒಟ್ಟು ಮೂರು ಮೆನು ಸಿದ್ಧಗೊಳಿಸಲಾಗಿದೆ. ಪ್ರತಿ ದಿನ ಒಂದೊಂದು ಮೆನುವಿನ ಪ್ರಕಾರ ಆಹಾರ ಸಿದ್ಧಪಡಿಸಿ ಬಡಿಸಲಾಗುತ್ತದೆ. ಇದೇ 28ರ ವರೆಗೆ ಆಹಾರ ಮೇಳ ನಡೆಯಲಿದೆ.

ಬಗೆ ಬಗೆಯ ಮೀನಿನ ಖಾದ್ಯಗಳು ಈ ಬಾರಿಯ ವಿಶೇಷತೆಗಳಲ್ಲಿ ಒಂದಾಗಿದೆ. ಚಿಕನ್, ಸೀಗಡಿ, ಏಡಿಯ ಖಾದ್ಯಗಳೊಂದಿಗೆ ಬಿರಿಯಾನಿಯೂ ಇದೆ. ಬೇಜ್ ಸುಕ್ತು, ಜಿಂಗಾ ಆಲೂ ಪೋಸ್ತ, ಧಮ್ ಆಲೂ ಸಸ್ಯಾಹಾರದಲ್ಲಿ ಪ್ರಮುಖವಾದವು. ಹಲವು ಬಗೆಯ ಸಿಹಿ ತಿಂಡಿಗಳು ಸಹ ಬಾಯಲ್ಲಿ ನೀರೂರಿಸುತ್ತಿವೆ. ಚಮ್ ಚಮ್, ಮಿದಿದಾನ, ರಸಗುಲ್ಲಾ ಇದರಲ್ಲಿ ಪ್ರಮುಖವಾದವು. ಮೂರ್ನಾಲ್ಕು ಬಗೆಯ ಕೇಕ್‌ಗಳೂ ಪಟ್ಟಿಯಲ್ಲಿವೆ.

‘ಬಂಗಾಳದಲ್ಲಿ ವಿಶೇಷ ರೀತಿಯಲ್ಲಿ ತಯಾರಿಸುವ ಮೀನಿನ ಹಾಗೂ ಚಿಕನ್ ಖಾದ್ಯಗಳನ್ನು ಆಹಾರ ಮೇಳದಲ್ಲಿ ನೀಡಲಾಗುತ್ತಿದೆ. ಬಂಗಾಳದ ರುಚಿಯನ್ನು ಇಲ್ಲಿ ಸವಿಯಲು ಇದೊಂದು ಸುವರ್ಣಾವಕಾಶ’ ಎನ್ನುತ್ತಾರೆ ಕ್ಲಾರ್ಕ್‌ ಇನ್ ಹೋಟೆಲ್‌ನ ಮುಖ್ಯ ಬಾಣಸಿಗ ಸಂಜಯ್ ಮಂಡಲ್.

ADVERTISEMENT

‘ಕಳೆದ ಬಾರಿ ಆಯೋಜಿಸಿದ್ದ ಬಂಗಾಳಿ ಆಹಾರ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿಯೂ ಅಂತಹುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿನ ಎಲ್ಲ ಬಂಗಾಳಿ ಖಾದ್ಯಗಳು ಜನರಿಗೆ ಇಷ್ಟವಾಗಲಿವೆ’ ಎಂದು ಸಹಾಯಕ ವ್ಯವಸ್ಥಾಪಕ ಸೌಮ್ಯ ರಂಜನ್ ಬಿಶಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.