ನವಲಗುಂದ ಪಟ್ಟಣದ ದಾಸೋಹ ಭವನದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು
ನವಲಗುಂದ: ‘ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಬಿಜೆಪಿ ಸದಸ್ಯತ್ವ ಅಭಿಯಾನವೂ ಅಡಿಪಾಯವಾಗಲಿದೆ. ವಿಕಸಿತ ಭಾರತದ ದೊಡ್ಡ ಕನಸು ನನಸಾದರೆ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತಕ್ಕೆ ಈಗ ಅಮೃತ ಕಾಲ ಬಂದಿದೆ’ ಎಂದು ಪಕ್ಷದ ಮುಖಂಡ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು.
ಪಟ್ಟಣದ ಗವಿಮಠ ದಾಸೋಹ ಭವನದಲ್ಲಿ ಭಾರತ ಮಾತೆಯ ಚಿತ್ರಕ್ಕೆ ಪೂಜೆ ಸಲ್ಲಿಸಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹತ್ತುಸಾವಿರ ಸದಸ್ಯರನ್ನು ಸೇರ್ಪಡೆಗೊಳಿಸುವುದರೊಂದಿಗೆ ಈ ಸದಸ್ಯತ್ವ ಅಭಿಯಾನವು ಭಾರತದ ಇತಿಹಾಸದಲ್ಲಿ ಒಂದು ದೊಡ್ಡ ಮುನ್ನುಡಿಯ ಅವಧಿಯಾಗಿದೆ’ ಎಂದರು.
ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತ್ತುಗಟ್ಟಿ, ಮಂಡಲ ಅಧ್ಯಕ್ಷ ಎಸ್.ಬಿ. ದಾನಪ್ಪಗೌಡ್ರ, ಮೃತ್ಯುಂಜಯ ಹಿರೇಮಠ, ಅಂದಾನಯ್ಯ ಹಿರೇಮಠ, ಮಹಾಂತೇಶ್ ಶ್ಯಾಗೋಟಿ, ಶಂಕರಗೌಡ ರಾಯನಗೌಡ, ಆನಂದ ಜಕ್ಕನಗೌಡ್ರ, ಪುರಸಭಾ ಸದಸ್ಯರಾದ ಶರಣಪ್ಪ ಹಕ್ಕರಕಿ, ಮಹಾಂತೇಶ ಕಲಾಲ, ಜ್ಯೋತಿ ಗೊಲ್ಲರ, ಪ್ರಭು ಇಬ್ರಾಹಿಂಪುರ, ಅಡಿವೆಪ್ಪ ಮನಮಿ, ಸಿದ್ಧನಗೌಡ ಪಾಟೀಲ, ಶಂಕರಗೌಡ ಬಾಳನಗೌಡ್ರ, ಮುತ್ತಣ್ಣ ಮನಮಿ, ರೋಹಿತ ಮತ್ತಿಹಳ್ಳಿ, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.