ADVERTISEMENT

ವೀರಶೈವ ಲಿಂಗಾಯ ವಧು– ವರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 7:21 IST
Last Updated 2 ಸೆಪ್ಟೆಂಬರ್ 2018, 7:21 IST

ಹುಬ್ಬಳ್ಳಿ: ಧಾರವಾಡದ ಗುರು ಅಸೋಸಿಯೇಟ್ಸ್ ವಧು ವರರ ಮಾಹಿತಿ ಹಾಗೂ ಸೇವಾ ಕೇಂದ್ರ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಧು–ವರರ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವೀರಶೈವ ಲಿಂಗಾಯತ ಮತ್ತು ಒಳ ಪಂಗಡದ ನೂರಕ್ಕೂ ಅಧಿಕ ಯುವಕ– ಯುವತಿಯರು ಭಾಗವಹಿಸಿದ್ದರು.

‘ತಮಗೆ ಸೂಕ್ತ ಎನಿಸುವ ವಧು– ವರರನ್ನು ಆಯ್ಕೆ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸಿಕೊಡಲಾಗಿತ್ತು. ನೂರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ವಿಚ್ಛೇದಿತರಿಗಾಗಿ ನಡೆದ ಪ್ರತ್ಯೇಕ ಸಮಾವೇಶದಲ್ಲಿಯೂ ಹೆಚ್ಚಿನ ಮಂದಿ ಭಾಗವಹಿಸಿದ್ದರು’ ಎಂದು ಗುರು ಅಸೋಸಿಯೇಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ಹೇಳಿದರು.

‘ಸಹೋದರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಉದ್ಯೋಗಸ್ಥ ವರನನ್ನು ಹುಡಕುವ ಸಲುವಾಗಿ ಸಮಾವೇಶಕ್ಕೆ ಬಂದಿದ್ದೇವೆ. ಸಮಾವೇಶಗಳಲ್ಲಿ ಒಳ್ಳೆಯ ಹುಡುಗ ಸಿಗುತ್ತಾನೆ ಎಂದು ಕೆಲವರು ಸಲಹೆ ನೀಡಿದ್ದರು’ ಎಂದು ನವಲೂರಿನ ಕಿರಣ್ ತಿಳಿಸಿದರು.

ADVERTISEMENT

‘ಮಗಳು ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿ. ಕೆಲಸ ಮಾಡುವ ಹುಡುಗನೇ ಬೇಕು ಎಂಬ ಕಾರಣಕ್ಕೆ ಸಮಾವೇಶಕ್ಕೆ ಬಂದಿದ್ದೇವೆ’ ಎಂದು ಹುಬ್ಬಳ್ಳಿಯ ಸುಭಾಷ್‌ಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.