ADVERTISEMENT

ತಮಿಳರ ಭಾವನೆಗೆ ಬ್ರಿಟಿಷ್‌ ವಿದ್ವಾಂಸರು ಕಾರಣ: ತಮಿಳ್‌ ಸೆಲ್ವಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 1:34 IST
Last Updated 23 ಜೂನ್ 2025, 1:34 IST
<div class="paragraphs"><p>ತಮಿಳ್‌ ಸೆಲ್ವಿ</p></div>

ತಮಿಳ್‌ ಸೆಲ್ವಿ

   

ಧಾರವಾಡ: ‘ಕನ್ನಡ, ತೆಲುಗು ಇವೆಲ್ಲವೂ ತಮಿಳಿನಿಂದ ಹುಟ್ಟಿದವು ಎಂಬ ಭಾವನೆ ತಮಿಳು ಭಾಷಿಕರಲ್ಲಿ ಬೇರೂರಲು ‌200 ವರ್ಷಗಳ ಹಿಂದೆ ಮತಪ್ರಚಾರಕ್ಕೆ ಭಾರತಕ್ಕೆ ಬಂದಿದ್ದ ಬ್ರಿಟಿಷ್‌ ವಿದ್ವಾಂಸರು ತಮಿಳು ಅಧ್ಯಯನ ಮಾಡಿ, ನಂತರ ಕನ್ನಡ, ತೆಲುಗು ಇತರ ಭಾಷೆಗಳನ್ನು ಕಲಿತದ್ದೂ ಒಂದು ಕಾರಣ’ ಎಂದು ಮದ್ರಾಸ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ತಮಿಳ್‌ ಸೆಲ್ವಿ ಹೇಳಿದರು.

ನಗರದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಭಾನುವಾರ ನಡೆದ ‘ಕನ್ನಡ ಭಾಷೆಯ ಅಸ್ಮಿತೆ’ ವಿಚಾರಸಂಕಿರಣದಲ್ಲಿ ಮಾತನಾಡಿದರು.

ADVERTISEMENT

‘ಭಾರತಕ್ಕೆ ಬಂದಿದ್ದ ಬ್ರಿಟಿಷ್‌ ವಿದ್ವಾಂಸರು ಇಲ್ಲಿನ ಭಾಷೆ ಕಲಿಯುತ್ತಾರೆ ಮತ್ತು ಸಾಹಿತ್ಯ ಅಧ್ಯಯನ ಮಾಡುತ್ತಾರೆ. ಅವರು ಕರ್ನಾಟಕಕ್ಕೂ ಮೊದಲು ತಮಿಳುನಾಡಿಗೆ ಭೇಟಿ ನೀಡಿರುತ್ತಾರೆ. ಈ ವಿದ್ವಾಂಸರು ಮೊದಲು ತಮಿಳು ಕಲಿತು, ತಮಿಳು ಕೃತಿಗಳನ್ನು ಓದುತ್ತಾರೆ. ನಂತರ ಕನ್ನಡ, ತೆಲುಗು ಮೊದಲಾದವುಗಳನ್ನು ಕಲಿಯುತ್ತಾರೆ. ತಮಿಳಿನಲ್ಲಿರುವ ಕೆಲ ಪದಗಳು ಕನ್ನಡ, ತೆಲುಗಿನಲ್ಲಿರುವುದನ್ನು ಕಲಿಕೆ ಸಂದರ್ಭದಲ್ಲಿ ಗಮನಿಸುತ್ತಾರೆ. ತಮಿಳಿನಿಂದ ಈ ಪದಗಳು ಬಂದಿವೆ ಎಂದುಕೊಳ್ಳುತ್ತಾರೆ’ ಎಂದರು.

‘ಸುಬ್ರಮಣ್ಯ ಭಾರತಿ ಅವರು ತಮಿಳಿನ ದೊಡ್ಡ ಕವಿ. ಈ ಕವಿ ಒಂದು ಪದ್ಯದಲ್ಲಿ ತಮಿಳಿನಿಂದ ಕನ್ನಡ, ತೆಲುಗು ಹುಟ್ಟಿವೆ ಎಂದು ಹೇಳಿದ್ದಾರೆ. ಮನೋನ್ಮಣಿ ಸುಂದರಂ ಪಿಳ್ಳೈ ಅವರು ರಚಿಸಿರುವ ತಮಿಳಿನ ನಾಡಗೀತೆಯಲ್ಲಿ ಕನ್ನಡ, ತೆಲುಗು, ಮಲಯಾಳಂ ಈ ಭಾಷೆಗಳ ತಾಯಿ ತಮಿಳು ಎಂದು ಇದೆ. ಶಾಲಾ ಪಠ್ಯಪುಸ್ತಕಗಳ ಮೊದಲಿಗೆ ನಾಡಗೀತೆ ಮುದ್ರಣವಾಗಿರುತ್ತದೆ. ಹೀಗಾಗಿ, ತಮಿಳುನಾಡಿನ ಜನ ತಮಿಳು ಕನ್ನಡ, ತೆಲುಗು, ಮಲಯಾಳಂನ ತಾಯಿ ತಮಿಳು ಎಂದು ನಂಬಿದ್ದಾರೆ’ ಎಂದು ವಿಶ್ಲೇಷಿಸಿದರು. 

ಭಾಷಾತಜ್ಞ ಗಣೇಶ್‌ ಎನ್‌.ದೇವಿ, ಭಾಷಾ ತಜ್ಞ ಸಂಗಮೇಶ ಸವದತ್ತಿಮಠ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾ‍ಪಕಿ ಶಶಿಕಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.