ADVERTISEMENT

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಸರ್ಕಾರಿ, ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 11:39 IST
Last Updated 16 ಡಿಸೆಂಬರ್ 2018, 11:39 IST

ಹುಬ್ಬಳ್ಳಿ: ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಅನಧಿಕೃತವಾಗಿ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್‌ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಚೋಳನ್‌, ‘ಎರಡೂ ಕಾರಿಡಾರ್‌ಗಳನ್ನು ಕೇವಲ ಬಿಆರ್‌ಟಿಎಸ್ ಬಸ್‌ಗಳು, ಅಂಬುಲೆನ್ಸ್‌, ಅಗ್ನಿಶಾಮಕ ಮತ್ತು ಇತರೆ ತುರ್ತು ಪರಿಸ್ಥಿತಿಯಂತಹ ವಾಹನಗಳ ಸಂಚಾರಕ್ಕೆ ಮಾತ್ರ ಮೀಸಲಿರಿಸಲಾಗಿದೆ. ರಸ್ತೆಯ ಎರಡೂ ಬದಿಯ ರಸ್ತೆಗಳನ್ನು ಸರ್ಕಾರಿ ಇಲಾಖೆಗಳ ವಾಹನಗಳು, ಸಾರ್ವಜನಿಕರ, ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾರಿಡಾರ್ ಉದ್ದಕ್ಕೂ ಜಂಕ್ಷನ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಸಿಬ್ಬಂದಿ ಕಾರಿಡಾರ್‌ನಲ್ಲಿ ಸಂಚರಿಸದಂತೆ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಆದರೂ ಕೆಲವು ಸರ್ಕಾರಿ ಇಲಾಖೆಗಳ ವಾಹನಗಳು ಮತ್ತು ಕೆಲವು ಸಂಘ–ಸಂಸ್ಥೆಗಳ ವಾಹನಗಳು ಭದ್ರತಾ ಸಿಬ್ಬಂದಿ ಮನವಿಯನ್ನು ಧಿಕ್ಕರಿಸಿ ಕಾರಿಡಾರ್‌ನಲ್ಲಿಯೇ ಸಂಚರಿಸುತ್ತಿವೆ.

ADVERTISEMENT

ಸೂಚನೆ ಮೀರಿ ಯಾವುದೇ ವಾಹನಗಳು ಕಾರಿಡಾರ್‌ನಲ್ಲಿ ಸಂಚರಿಸಿ ಯಾವುದೇ ಅಪಘಾತಗಳು ಸಂಭವಿಸಿದಲ್ಲಿ ಅದಕ್ಕೆ ಇಲಾಖೆ, ಸಂಸ್ಥೆ, ವ್ಯಕ್ತಿಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.