ADVERTISEMENT

ಸಂಸ್ಕಾರಯುತ ಜೀವನ ಕಟ್ಟಿಕೊಳ್ಳಿ: ಎಂ.ಸಿ. ಹಿರೇಮಠ ಅಭಿಮತ

ಅಳ್ನಾವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಹಿರೇಮಠ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 4:07 IST
Last Updated 5 ಜನವರಿ 2026, 4:07 IST
ಅಳ್ನಾವರದ ಶ್ರೀಮತಿ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ.ಹಿರೇಮಠ ಮಾತನಾಡಿದರು
ಅಳ್ನಾವರದ ಶ್ರೀಮತಿ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ.ಹಿರೇಮಠ ಮಾತನಾಡಿದರು   

ಅಳ್ನಾವರ: ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಇಂದಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರಯುತ ಜ್ಞಾನಾರ್ಜನೆ, ಬದುಕಿನ ಮೌಲ್ಯ ಕಲಿಸುವುದು ಶಿಕ್ಷಣ ಸಂಸ್ಥೆಗಳ ಮುಖ್ಯ ಉದ್ದೇಶ ಆಗಬೇಕು ಎಂದು ಅಳ್ನಾವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ.ಹಿರೇಮಠ ಹೇಳಿದರು.

ಇಲ್ಲಿನ ಶ್ರೀಮತಿ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಹೊಣೆಗಾರಿಕೆ ಪಾಲಕರ ಮೇಲೆಯೂ ಇದೆ. ಪ್ರತಿಯೊಬ್ಬ ವಿದ್ಯಾರ್ಥಿ ಸಮಾಜದ ಮಾದರಿ ವ್ಯಕ್ತಿಯಾಗಿ ರೂಪಗೊಳ್ಳಬೇಕು. ಶಿಕ್ಷಣ, ಸಂಸ್ಕಾರ ರೂಢಿಸಿಕೊಳ್ಳಬೇಕು. ಸತತ ಅಧ್ಯಯನ, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಿ, ಶಾಲೆಗೂ, ಪಾಲಕರಿಗೂ ಕೀರ್ತಿ ತರಬೇಕು ಎಂದರು.

ADVERTISEMENT

ಕ್ರೀಡಾ ಸ್ಪರ್ಧಾ ವಿಜೇತರಿಗೆ ಹಾಗೂ ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಕೃಷ್ಣ ರಾವುತ್, ದನಶ್ರೀ ದಡ್ಡಿ, ಪ್ರೀಯಾ ಪಟ್ಟಣ, ಅಪರ್ಣಾ ಮಿಟಗಾರ ಅವರಿಗೆ ಗೌರವ ಸನ್ಮಾನ ನಡೆಯಿತು. ಆದರ್ಶ ವಿದ್ಯಾರ್ಥಿ ಪ್ರಜ್ವಲ್ ಅಶೋಕ ಜೊಡಟ್ಟಿಯವರ ಹಾಗೂ ಆದರ್ಶ ವಿದ್ಯಾರ್ಥಿನಿ ಪ್ರತಿಕ್ಷಾ ಚೌಗಲೆ ಅವರಿಗೆ ಪಶಸ್ತಿ ನೀಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ವಿನಾಯಕ ಹಿರೇಮಠ, ಆಶೀಸ್ ಪಟೇಲ ಮಾತನಾಡಿ, ಬರುವ ವರ್ಷ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸುವ ಚಿಂತನೆ ಇದೆ. ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಪಾಲಕರು ಸೇರಿ ಕೈಜೊಡಿಸಿ ಶ್ರಮಿಸಬೇಕು ಎಂದರು.

ಸಂಸ್ಥೆಯ ಖಜಾಂಚಿ ಆರ್.ಎಂ. ಕಲಾಲ, ದೇವಜಿ ಪಟೇಲ, ಚಂದುಲಾಲ ಪಟೇಲ, ಅಮೃತ ಪಟೇಲ, ಮುಖ್ಯ ಶಿಕ್ಷಕಿ ಶೋಭಾ ನಾಯಕ, ಸುಜಾತಾ ಜಂಗಮ, ವಿದ್ಯಾ ಚಕ್ರಸಾಲಿ ಇದ್ದರು.

ಅನುಷ್ ಬಂದಕನವರ ಹಾಗೂ ಸಕೀನಾ ಮೊಖಾಶಿ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.