ADVERTISEMENT

ಅನಗತ್ಯ ಸಂಚರಿಸಿದವರಿಗೆ ಬಸ್ಕಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 6:04 IST
Last Updated 1 ಮೇ 2021, 6:04 IST
ದಾವಣಗೆರೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಸವಾರನಿಗೆ ಪೊಲೀಸರು ಬಸ್ಕಿ ಹೊಡಿಸಿ ಎಚ್ಚರಿಕೆ ನೀಡಿದರು
ದಾವಣಗೆರೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಸವಾರನಿಗೆ ಪೊಲೀಸರು ಬಸ್ಕಿ ಹೊಡಿಸಿ ಎಚ್ಚರಿಕೆ ನೀಡಿದರು   

ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‌ಡೌನ್ ನಿಮಿತ್ತ‌ ನಗರದಲ್ಲಿ ಅಂಗಡಿ ಬಾಗಿಲುಗಳು ಮುಚ್ಚಿದ್ದರೂ ವಾಹನಗಳ ಸಂಚಾರ ಹೆಚ್ಚಾಗಿತ್ತು. ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.

ನಗರದಆರ್‌ಟಿಒ ವೃತ್ತದ ಬಳಿ ನಿಯಮ ಉಲ್ಲಂಘಿಸಿ ಪದೇ ಪದೇ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವಾಹನ ಸವಾರೊಬ್ಬರಿಗೆ ಪೊಲೀಸರು ಬಸ್ಕಿ ಹೊಡಿಸಿ ಎಚ್ಚರಿಕೆ ನೀಡಿದರು.

₹ 38 ಸಾವಿರ ದಂಡ: ಮಾಸ್ಕ್ ಧರಿಸದೇ ಅನಗತ್ಯವಾಗಿ ಸಂಚರಿಸುವವರ ವಿರುದ್ಧ 309 ಪ್ರಕರಣ ದಾಖಲಿಸಿ ₹38,850 ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ
ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.