
ಪ್ರಜಾವಾಣಿ ವಾರ್ತೆ
ಕುಂದಗೋಳ: ತಾಲ್ಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಮಂಗಳವಾರ ಬಸವೇಶ್ವರ ರಥೋತ್ಸವ ನಡೆಯಿತು. ರಥೋತ್ಸವದ ಪ್ರಯುಕ್ತ ಬೆಳಿಗ್ಗೆ ಬಸವಣ್ಣ ಮೂರ್ತಿಗೆ ಬಿಲ್ವಪತ್ರೆ ಅರ್ಚನೆ, ಪುಷ್ಪಾರ್ಚನೆ, ಮಹಾರುದ್ರಾಭಿಷೇಕ ಮಾಡಲಾಯಿತು.
ವಾದ್ಯ ಮೇಳದೊಂದಿಗೆ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ‘ಹರ ಹರ ಮಹಾದೇವ’, ‘ಜೈ ಹಿರೇಹರಕುಣಿ ಬಸವೇಶ’ ಎಂಬ ಘೋಷಣೆಗಳೊಂದಿಗೆ ತೇರು ಎಳೆದು ಭಕ್ತಿ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.