ADVERTISEMENT

ಅಕ್ಷರ ಕ್ರಾಂತಿ ಮಾಡಿದ ಕಣವಿ: ನಿಜಗುಣಾನಂದ ಸ್ವಾಮಿಜಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 11:09 IST
Last Updated 16 ಫೆಬ್ರುವರಿ 2022, 11:09 IST
   

ಧಾರವಾಡ: ನಾಡಿನ ಧೀಮಂತ ಕವಿಯಾಗಿದ್ದ ನಾಡೋಜ ಡಾ.ಚನ್ನವೀರ ಕಣವಿಯವರು ತಮ್ಮ ಅಕ್ಷರಗಳ ಮೂಲಕವೇ ಕ್ರಾಂತಿಯನ್ನು ಮಾಡಿದ್ದಾರೆ. ಅವರ ಅಗಲಿಕೆಯೂ ಅತೀವ ನೋವು ತರಿಸಿದೆ ಎಂದು ಬೈಲೂರಿನ ನಿಷ್ಕಲ್ಮಶ ಮಠದನಿಜಗುಣಾನಂದ ಸ್ವಾಮೀಜಿ ಹೇಳಿದರು.

ನಗರದ ಕೆಸಿಡಿ ಮೈದಾನದಲ್ಲಿ ನಾಡೋಜ ಡಾ. ಚನ್ನವೀರ ಕಣವಿ ಅಂತಿಮ ದರ್ಶನ ಪಡೆದು ಅವರು ಮಾತನಾಡಿದರು.

ನಾಡಿನ ಖ್ಯಾತ ಕವಿಗಳಾಗಿದ್ದ ಕಣವಿಯವರನ್ನುಕಳೆದುಕೊಂಡಿದ್ದು ದೊಡ್ಡ ನಷ್ಟವಾಗಿದೆ. ಅವರು ಹಚ್ಚೆವು ಕನ್ನಡದ ದೀಪ ಅಂತಾ ಹಾಡು ಬರೆದು ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ.

ADVERTISEMENT

ರಾಷ್ಟ್ರ ಕವಿಗಳ ಸಾಲಿನಲ್ಲಿ ಕಣವಿಯೂ ಒಬ್ಬರಾಗಿ ನಿಲ್ಲುವಂತವರು. ಅವರನ್ನ ಸರಕಾರ ಗುರುತಿಸಬೇಕು ಎಂದು ಶ್ರೀಗಳು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.