ADVERTISEMENT

ನೃಪತುಂಗ ಯುವಕ ಮಂಡಳದಿಂದ ಯೋಧರಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 11:30 IST
Last Updated 17 ಫೆಬ್ರುವರಿ 2019, 11:30 IST
ವೀರ ಯೋಧರಿಗೆ ವಿಶ್ವೇಶ್ವರನಗರದ ನೃಪತುಂಗ ಯುವಕ ಮಂಡಳ, ಸಾಯಿ ಸದ್ಭಕ್ತ ಮಂಡಳಿ, ಸಾಯಿ ಆಟೊ ಚಾಲಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು–
ವೀರ ಯೋಧರಿಗೆ ವಿಶ್ವೇಶ್ವರನಗರದ ನೃಪತುಂಗ ಯುವಕ ಮಂಡಳ, ಸಾಯಿ ಸದ್ಭಕ್ತ ಮಂಡಳಿ, ಸಾಯಿ ಆಟೊ ಚಾಲಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು–   

ಹುಬ್ಬಳ್ಳಿ: ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ವಿಶ್ವೇಶ್ವರನಗರದ ನೃಪತುಂಗ ಯುವಕ ಮಂಡಳ, ಸಾಯಿ ಸದ್ಭಕ್ತ ಮಂಡಳಿ, ಸಾಯಿ ಆಟೊ ಚಾಲಕರ ಸಂಘದ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು. ಮೊಂಬತ್ತಿ ಬೆಳಗಿ, ಎರಡು ನಿಮಿಷ ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ನೃಪತುಂಗ ಯುವಕ ಮಂಡಳದ ಗೌರವ ಅಧ್ಯಕ್ಷ ಸಿದ್ದು ಮೊಗಲಿಶೆಟ್ಟರ್ ಮಾತನಾಡಿ, ಉಗ್ರರ ಹೇಯ ಕೃತ್ಯಕ್ಕೆ ತಕ್ಕ ಉತ್ತರ ನೀಡಬೇಕು. ದೇಶದ ಜನ ಸೈನಿಕರ ಬೆಂಬಲಕ್ಕೆ ನಿಲ್ಲಬೇಕು. ದೇಶದ ರಕ್ಷಣೆಗೆ ಯೋಧರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗದು ಎಂದರು.

ಶಿಕ್ಷಣ ತಜ್ಞ ಬಿ.ಎಫ್. ವಿಜಾಪೂರ ಮಾತನಾಡಿ, ಇಡೀ ದೇಶದ ಜನರು ಏಕ ಧ್ವನಿಯಲ್ಲಿ ಈ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಉಗ್ರರಿಗೆ ಸರಿಯಾದ ಪಾಠ ಕಲಿಸಬೇಕು ಎಂದರು. ‘ನಾವು ನಿವೃತ್ತರಾದರೂ ನಮ್ಮ ಶಕ್ತಿ ಕುಂದಿಲ್ಲ. ದೇಶಕ್ಕಾಗಿ ಈಗಲೂ ಹೋರಾಡಲು ಸಿದ್ಧರಿದ್ದೇವೆ’ ಎಂದು ನಿವೃತ್ತ ಸೇನಾಧಿಕಾರಿ ಕ್ಯಾ. ಭಜಂತ್ರಿ, ಖಾಜಾಸಾಬ ಘಟ್ಟದ ಹೇಳಿದರು.

ADVERTISEMENT

ನಿವೃತ್ತ ಡಿವೈಎಸ್ಪಿ ನೆಲಗುಡ್ಡ, ನಿಂಗಮ್ಮ ಪಾಟೀಲ, ನಿವೃತ್ತ ಪ್ರಾಂಶುಪಾಲೆ ಟೊಣಪಿ, ಉಮೇಶ ಕುಲಕರ್ಣಿ, ಸುದರ್ಶನ ದಿನ್ನಿಹಳ್ಳಿ, ರವಿ ನಾಯಕ, ಈರಣ್ಣ ಹುಲಸೋಗಿ, ಪರಶುರಾಮ, ನಾಗರಾಜ, ಲೋಕೇಶ, ಬಸವರಾಜ ಮೊಗಲಿಶೆಟ್ಟರ, ಗಿರೀಶ ವಿರುಪಾಕ್ಷರ, ಗಿರೀಶ ಲೂತಿಮಠ, ರಾಜೇಂದ್ರ ಪಾಟೀಲ, ಪ್ರಕಾಶ ವಿಜಾಪುರ, ವಾದಿರಾಜ ಜುಂಜರವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.