ಹುಬ್ಬಳ್ಳಿ: ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ (ಮೂಜಗು) ಭೇಟಿಗಾಗಿ ದಿಂಗಾಲೇಶ್ವರ ಸ್ವಾಮೀಜಿ ಗುರುವಾರ ಮಧ್ಯಾಹ್ನದಿಂದಮಠದಲ್ಲಿ ಕಾದು ಕುಳಿತಿದ್ದಾರೆ.
ದಿಂಗಾಲೇಶ್ವರರನ್ನು ಭೇಟಿಯಾಗಲುಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿನಿರಾಕರಿಸಿದ್ದಾರೆ.ಇನ್ನೂ ಕೆಲಕಾಲ ಕಾಯುವುದಾಗಿ ದಿಂಗಾಲೇಶ್ವರರು ಹೇಳಿದ್ದಾರೆ.
‘ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಸ್ವತಂತ್ರವಾಗಿ ಬಿಡಬೇಕು. ನಮ್ಮನ್ನು ಭೇಟಿಯಾಗದಂತೆ ಅವರನ್ನು ತಡೆದವರು ಯಾರು ಎಂಬುದು ಬಹಿರಂಗವಾಗಬೇಕು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.
ವಿವಾದಕ್ಕೆ ತೆರೆ ಎಳೆಯಬೇಕಾಗಿದೆ. ಯಾವುದೇ ಗದ್ದಲ ಇಲ್ಲ. ಭಕ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ವಿನಂತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.