ADVERTISEMENT

ವೈದ್ಯ ವೃತ್ತಿಯ ಪಾವಿತ್ರ್ಯ ಕಾಪಾಡಿ: ಸಂಜಯ ಗುಪ್ತಾ ಹೇಳಿಕೆ

ರಾಷ್ಟ್ರೀಯ ಹೋಮಿಯೋಪತಿ ಕೇಂದ್ರದ ಮುಖ್ಯ ಕಾರ್ಯದರ್ಶಿ ಸಂಜಯ ಗುಪ್ತಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 15:46 IST
Last Updated 29 ಏಪ್ರಿಲ್ 2025, 15:46 IST
ಧಾರವಾಡದ ಕ.ವಿ.ವಿ. ಸುವರ್ಣಮಹೋತ್ಸವ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಡಾ. ಸಂಜಯ ಗುಪ್ತಾ ಮಾತನಾಡಿದರು 
ಧಾರವಾಡದ ಕ.ವಿ.ವಿ. ಸುವರ್ಣಮಹೋತ್ಸವ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಡಾ. ಸಂಜಯ ಗುಪ್ತಾ ಮಾತನಾಡಿದರು     

ಧಾರವಾಡ: ‘ವೈದ್ಯರು ವೃತ್ತಿ ಪಾವಿತ್ರ್ಯ ಕಾಪಾಡಿಕೊಳ್ಳಬೇಕು’ ಎಂದು ರಾಷ್ಟ್ರೀಯ ಹೋಮಿಯೋಪತಿ ಕೇಂದ್ರದ ಮುಖ್ಯ ಕಾರ್ಯದರ್ಶಿ ಡಾ. ಸಂಜಯ ಗುಪ್ತಾ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣಮಹೋತ್ಸವ ಸಭಾಭವನದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಡಾ. ಬಿ.ಡಿ. ಜತ್ತಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವೈದ್ಯರು, ಬಡವರ ಸೇವೆ ಮಾಡಬೇಕು. ವೈದ್ಯ ವೃತ್ತಿಯನ್ನು ವಾಣಿಜ್ಯೀಕರಣ ಮಾಡದೆ ಸೇವೆಯೆಂದು ಪರಿಗಣಿಸಬೇಕು. ಉತ್ತಮ ಚಿಕಿತ್ಸೆ ನೀಡಬೇಕು. ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಸಾಧನೆ ಮಾಡಬೇಕು’ ಎಂದು ಹೇಳಿದರು.

ADVERTISEMENT

ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ‘ಸಮಾಜದಲ್ಲಿ ವೈದ್ಯರ ಜವಾಬ್ದಾರಿ ಮಹತ್ವದ್ದು. ಉತ್ತಮ ಸಂಶೋಧನೆಗಳಲ್ಲಿ ತೊಡಗಬೇಕು. ಆರೋಗ್ಯ ಕ್ಷೇತ್ರದಲ್ಲಿ ಮಾದರಿಯಾಗಬೇಕು’ ಎಂದರು.

ಚಿನ್ನದ ಪದಕ ಹಾಗೂ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ರಾಘವೇಂದ್ರ ತವನಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ತಾಳಿಕೋಟಿ, ಬಸವರಾಜ ವಸ್ತ್ರದ, ರಾಧಾಕೃಷ್ಣನ, ಜಗದೀಶ ಮಳಗಿ, ಜಿ.ಜಿ. ಹಿರೇಮಠ, ಯಕ್ಕುಂಡಡಿಮಠ, ಆನಂದ ಹೊಸುರ, ನಾರಾಯಣ ಮೋರೆ, ಉಮಾ ಚವಾಣ್, ಅಶೋಕ ಶೆಟ್ಟರ, ವೈಷ್ಣವಿ ಸತೀಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.