ADVERTISEMENT

ಕ್ರಿಕೆಟ್‌: ತೇಜಲ್‌ ಅಕಾಡೆಮಿ ಚಾಂಪಿಯನ್ಸ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 16:47 IST
Last Updated 14 ಮಾರ್ಚ್ 2022, 16:47 IST
ಕೆಎಸ್‌ಸಿಎ ಮೂರನೇ ಡಿವಿಷನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ ತಂಡ ಹಾಗೂ ಸಿಬ್ಬಂದಿ ಕುಳಿತವರು; ಎಡದಿಂದ: ರಾಜಾರಾಮ ವೈದ್ಯ, ಶ್ರೀವತ್ಸ ಪುರಾಣಿಕ (ಕೋಚ್‌), ಪ್ರಮೋದ ಜಂಬಗಿ (ಕೋಚ್‌), ಸೋಮಶೇಖರ ಶಿರಗುಪ್ಪಿ (ಸಲಹೆಗಾರ), ಶಿವಯೋಗಿ ಮುದಿಗೌಡರ (ನಾಯಕ), ನವೀನ ಗಡದಿನ್ನಿ (ಉಪನಾಯಕ), ಆತ್ರೇಯ ಇನಾಮದಾರ. ನಿಂತವರು; ಆದಿತ್ಯ ಉಡುಪ, ಪ್ರೀತಮ್‌ ಎಚ್‌., ಗಣೇಶ ನಾಯ್ಕ, ಚಿರಂತ ಹೆಗಡೆ, ಸಾಯಿನಾಥ ರಾಜೋಲಿ, ಈಶ್ವರ, ಆಕಾಶ ಸಾಲಿಮಠ, ಸೂರ್ಯ ಆರ್‌.ಎಸ್‌., ವಿನಯ ಎಲ್‌., ರೋಹಿತ ಪಾಟೀಲ, ರಮಾನಂದ ಶಾನಬಾಳ, ಅಮಿತ್‌ ಸರಾಫ, ಪ್ರಲ್ಹಾದ ನಾಯ್ಕ ಹಾಗೂ ಪ್ರತೀತ ಜಂಬಗಿ

ಹುಬ್ಬಳ್ಳಿ: ಲೀಗ್‌ ಹಂತದಿಂದ ಉತ್ತಮ ಪ್ರದರ್ಶನ ತೋರಿ ನೌಕೌಟ್‌ನಲ್ಲಿಯೂ ಮಿಂಚಿದ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ (ಟಿಎಸ್‌ಸಿಎ) ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿದ್ದ ಮೂರನೇ ಡಿವಿಷನ್‌ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ.

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯ
ದಲ್ಲಿ ಮೊದಲು ಬ್ಯಾಟ್‌ ಮಾಡಿದ ಟಿಎಸ್‌ಸಿಎ 28.5 ಓವರ್‌ಗಳಲ್ಲಿ 177 ರನ್‌ ಕಲೆಹಾಕಿ ಆಲೌಟ್‌ ಆಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಪ್ರಲ್ಹಾದ ನಾಯ್ಕ 87 ರನ್‌ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ಕಾಣಿಕೆ ನೀಡಿದರು.

ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ‘ಸಿ’ ತಂಡ ಗುರಿಯ ಎದುರು ಉತ್ತಮ ಹೋರಾಟ ತೋರಿತಾದರೂ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಈ ತಂಡ ಅಂತಿಮವಾಗಿ 30 ಓವರ್‌ಗಳಲ್ಲಿ 102 ರನ್‌ ಗಳಿಸಿ ಆಲೌಟ್‌ ಆಯಿತು.

ADVERTISEMENT

ಇದರಿಂದ 75 ರನ್‌ಗಳ ಗೆಲುವು ಪಡೆದ ತೇಜಲ್‌ ತಂಡ ‘ಬಿ’ ಡಿವಿಷನ್‌ ಟೂರ್ನಿಗೆ ಬಡ್ತಿ ಪಡೆದುಕೊಂಡಿತು. ತೇಜಲ್‌ ತಂಡದ ರಾಜಾರಾಮ್ ವೈದ್ಯ ಮತ್ತು ನವೀನ ಗಡದಿನ್ನಿ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ತಂಡ ಪ್ರಶಸ್ತಿ ಗೆಲ್ಲಲು ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.