ಧಾರವಾಡ: ಶಿಶುವೊಂದನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದಕ್ಕೆ ಸಂಬಂಧಿಸಿದಂತೆ ಛಾಯಾ, ರಮಾ ಮತ್ತು ಜಯಶ್ರೀ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಛಾಯಾ ಮತ್ತು ರಮಾ ಅವರು ಶಿಶುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆ ತಂದಾಗ ಸಿಕ್ಕಿಬಿದ್ದಿದ್ದಾರೆ.
‘ಛಾಯಾ ಮತ್ತು ರಮಾ ಅವರು ಎಂಟು ದಿನಗಳ ಶಿಶುವನ್ನು ಕಾಮಾಲೆ ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ಧಾರೆ. ಆಸ್ಪತ್ರೆ ಸಿಬ್ಬಂದಿ ಶಿಶುವಿನ ವಿವರ ಕೇಳಿದಾಗ ಅವರಿಬ್ಬರೂ ತಡಬಡಾಯಿಸಿದ್ಧಾರೆ. ಸಿಬ್ಬಂದಿ ಅನುಮಾನಗೊಂಡು ತಕ್ಷಣವೇ ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಘಟಕದವರು ಪರಿಶೀಲಿಸಿ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಛಾಯಾ ಪುತ್ರಿ ರಮಾ ಜಮಖಂಡಿಯವರು, ಧಾರವಾಡ ತವರೂರು. ಈಗ ತವರೂರಿಗೆ ಬಂದಿದ್ದಾರೆ. ಶಿಶುವನ್ನು ವಿಜಯಪುರದಲ್ಲಿ ದತ್ತು ಪಡೆದಿದ್ದೇನೆ ಮತ್ತು ಈ ಕಾರ್ಯಕ್ಕೆ ಬೆಂಗಳೂರಿನ ಜಯಶ್ರೀ ಸಹಕಾರ ನೀಡಿದ್ದಾಗಿ ಛಾಯಾ ತಿಳಿಸಿದ್ದಾರೆ. ಈ ಮಹಿಳೆ ವಿಜಯಪುರದಲ್ಲಿ ಶಿಶುವನ್ನು ದತ್ತು ಪಡೆದಿರುವ ಬಗ್ಗೆ ಖಚಿತವಾಗಿಲ್ಲ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.