ADVERTISEMENT

ರೈಲ್ವೆ ಖಾಸಗೀಕರಣ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 14:16 IST
Last Updated 12 ನವೆಂಬರ್ 2020, 14:16 IST
ರೈಲ್ವೆ ಖಾಸಗೀಕರಣ ಕೈಬಿಡಬೇಕು ಮತ್ತು ಹುಬ್ಬಳ್ಳಿ– ಬೆಂಗಳೂರು ಮಧ್ಯೆ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ, ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ಸಂಘಟನೆಯವರು ಹುಬ್ಬಳ್ಳಿ ರೈಲು ನಿಲ್ದಾಣದ ಎದುರು ಪ್ರತಿಭಟಿಸಿ, ನಿಲ್ದಾಣದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು
ರೈಲ್ವೆ ಖಾಸಗೀಕರಣ ಕೈಬಿಡಬೇಕು ಮತ್ತು ಹುಬ್ಬಳ್ಳಿ– ಬೆಂಗಳೂರು ಮಧ್ಯೆ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ, ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ಸಂಘಟನೆಯವರು ಹುಬ್ಬಳ್ಳಿ ರೈಲು ನಿಲ್ದಾಣದ ಎದುರು ಪ್ರತಿಭಟಿಸಿ, ನಿಲ್ದಾಣದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ರೈಲ್ವೆ ಖಾಸಗೀಕರಣ ಕೈಬಿಡಬೇಕು ಮತ್ತು ಹುಬ್ಬಳ್ಳಿ –ಬೆಂಗಳೂರು ಮಧ್ಯೆ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ, ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ವತಿಯಿಂದ ನಗರದ ರೈಲು ನಿಲ್ದಾಣದ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಅಭಿಯಾನದ ಗಂಗಾಧರ ಬಡಿಗೇರ, ‘ಸಾಮಾನ್ಯ ಜನ ಪ್ರಯಾಣಕ್ಕೆ ರೈಲು ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣ ಮಾಡಬಾರದು. ಇದರಿಂದ ಈಗ ಸಿಗುತ್ತಿರುವ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಒತ್ತಾಯಿಸಿದರು.

‘ಕೋವಿಡ್ –19 ಬಿಕ್ಕಟ್ಟಿನ ಸಂದರ್ಭದಲ್ಲಿ ರೈಲ್ವೆ ಇಲಾಖೆಯು ನಿತ್ಯ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಿದೆ. ಪ್ಯಾಸೆಂಜರ್‌ಗಳನ್ನು ಎಕ್ಸ್‌ಪ್ರೆಸ್‌ಗಳನ್ನಾಗಿ ಪರಿವರ್ತಿಸಿದೆ. ಇದರಿಂದಾಗಿ ರೈಲುಗಳು ಸಂಚರಿಸುವ ಮಾರ್ಗದ ಪಟ್ಟಣಗಳಲ್ಲಿ ರೈಲುಗಳು ನಿಲ್ಲುವುದಿಲ್ಲ. ಇದರಿಂದ, ಹಲವರು ಪ್ರಯಾಣದಿಂದ ವಂಚಿತರಾಗುತ್ತಾರೆ’ ಎಂದರು.

ADVERTISEMENT

ರಮೇಶ ಹೊಸಮನಿ ಮಾತನಾಡಿ, ‘ಸರ್ಕಾರ ರೈಲ್ವೆ ಖಾಸಗೀಕರಣವನ್ನು ಕೈಬಿಡದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಳಿಕ ನಿಲ್ದಾಣದ ಮ್ಯಾನೇಜರ್ ಮೂಲಕ, ರೈಲ್ವೆ ಸಚಿವರು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹನಮೇಶ ಹುಡೇದ, ಮಹಾಂತೇಶ ಬೀಳೂರು, ಅರುಣ, ಇಮ್ರಾನ್ ಖಾನ್ ರಹೀಂಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.