ADVERTISEMENT

ಅಣ್ಣಿಗೇರಿ | ಡೆಂಗಿ ಭೀತಿ: ಪಟ್ಟಣ ಸ್ವಚ್ಛತೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:53 IST
Last Updated 19 ಜುಲೈ 2024, 15:53 IST
ಅಣ್ಣಿಗೇರಿಯಲ್ಲಿ ಡೆಂಗಿ ನಿಯಂತ್ರಿಸಲು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಯುವಶಕ್ತಿ ಪಡೆಯಿಂದ ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಅಣ್ಣಿಗೇರಿಯಲ್ಲಿ ಡೆಂಗಿ ನಿಯಂತ್ರಿಸಲು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಯುವಶಕ್ತಿ ಪಡೆಯಿಂದ ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು   

ಅಣ್ಣಿಗೇರಿ: ಡೆಂಗಿ ಭೀತಿಯಿದ್ದು, ಪಟ್ಟಣದಲ್ಲಿನ ಚರಂಡಿ ಸ್ವಚ್ಛಗೊಳಿಸಿ, ಸೊಳ್ಳೆ ನಿರೋಧಕ ಔಷಧಿ ಸಿಂಪಡಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಆಡಳಿತಕ್ಕೆ ಪಟ್ಟಣದ ಯುವ ಪಡೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಪಟ್ಟಣದಲ್ಲಿ ಎಲ್ಲರೂ ಸ್ವಚ್ಛತೆ  ಕಾಪಾಡಬೇಕು ಎಂದು ಸ್ಥಳೀಯ ಆಡಳಿತವು ಜನರಿಗೆ ಸೂಚನೆ ನೀಡಬೇಕು. ಸ್ವಚ್ಛತೆ ಕಾಪಾಡದೇ ಇರುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ಭರತೇಶ್ ಜೈನ್ ಆಗ್ರಹಿಸಿದರು. 

ಪಟ್ಟಣದಲ್ಲಿ ಪರಿಸರ ಸ್ವಚ್ಛತೆ ಜನಜಾಗೃತಿ ಮೂಡಿಸಲು ಅವಶ್ಯ ಬಿದ್ದಲ್ಲಿ ಯುವಪಡೆ ಸಹಾಯ ಪಡೆದುಕೊಳ್ಳಬಹುದು ಎಂದರು. 

ADVERTISEMENT

ಅಮೃತ ಮರಡ್ಡಿ, ಕಿರಣಕುಮಾರ ಅಂಗಡಿ, ರವಿಕುಮಾರ ದಿಡ್ಡಿ, ವಿಕಾಸ ಹೂಗಾರ, ಹರೀಶ ಜಂಗಲ, ಆನಂದ ಬಿಲ್ಲಹದ್ದನ್ನವರ, ದರ್ಶನ ಮಡಿವಾಳರ ಸೇರಿದಂತೆ ಮೊದಲಾದರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.