ADVERTISEMENT

‘ಸಿ.ಎಂ ಗೃಹಕಚೇರಿಯಲ್ಲಿ ನಕ್ಸಲರ ಶರಣಾಗತಿ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 15:32 IST
Last Updated 10 ಜನವರಿ 2025, 15:32 IST

ಧಾರವಾಡ: ‘ನಕ್ಸಲರ ಶರಣಾಗತಿ ಪ್ರಕ್ರಿಯೆಯನ್ನು ಪೊಲೀಸ್‌ ಠಾಣೆ ಅಥವಾ ಕೋರ್ಟ್‌ನಲ್ಲಿ ನಡೆಸಬೇಕಿತ್ತು. ಅವರನ್ನು ಮುಖ್ಯಮಂತ್ರಿಯ ಗೃಹ ಕಚೇರಿಗೆ ಕರೆದೊಯ್ದು ಪ್ರಕ್ರಿಯೆ ನಡೆಸಿದ್ದು ಸರಿಯಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಜ್ಯೋತಿ ಪ್ರಕಾಶ ಮಿರ್ಜಿ ದೂರಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಕ್ಸಲರನ್ನು ಶರಣಾಗತಿ ಮಾಡಿಸಿದ್ದು ಒಳ್ಳೆಯದು. ಆದರೆ, ಕಾಂಗ್ರೆಸ್‌ ಸರ್ಕಾರವು ನಕ್ಸಲ್‌ ಶರಣಾಗತಿ ವಿಚಾರದಲ್ಲೂ ರಾಜಕೀಯ ಲಾಭಕ್ಕೆ ಕೈಹಾಕಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT