ಉಪ್ಪಿನಬೆಟಗೇರಿ: ಪ್ರಗತಿ ಕಾಲೊನಿ ಯೋಜನೆಯಡಿ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಹೆಬ್ಬಳ್ಳಿಯ 7ನೇ ವಾರ್ಡ್‌ನ ರಸ್ತೆಗೆ ₹ 30 ಲಕ್ಷ ಹಾಗೂ 12ನೇ ವಾರ್ಡ್‌ನ ರಸ್ತೆಗೆ ₹20 ಲಕ್ಷ ಮೊತ್ತದ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಇವೆರಡೂ ಪರಿಶಿಷ್ಟ ಜಾತಿ ಕಾಲೊನಿಗೆ ಒಳಪಟ್ಟಿದ್ದು, ₹ 50ಲಕ್ಷ ಮೊತ್ತದಲ್ಲಿ ಸಿ.ಸಿ. ರಸ್ತೆ ನಿರ್ಮಾಣವಾಗಲಿದೆ. ಶಾಸಕ ವಿನಯ ಕುಲಕರ್ಣಿ ಪುತ್ರ ಹೇಮಂತ ಕುಲಕರ್ಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ ಭೋವಿ, ಉಪಾಧ್ಯಕ್ಷೆ ಸುಶೀಲವ್ವ ಸಾಲಿ, ಪಿಡಿಒ ಬಸವರಾಜ ಮಾದನಬಾವಿ, ಚನಬಸಪ್ಪ ಮಟ್ಟಿ, ನಿಂಗಪ್ಪ ಮೊರಬದ, ಮಂಜುನಾಥ ಭೀಮಕ್ಕನವರ, ತೇಜಸ್ವಿನಿ ತಲವಾಯಿ, ಶೃತಿ ಎನ್., ಗೀತಾ ದೇಸಾಯಿ, ಮಂಜುಳಾ ಮಲ್ನಾಡದ, ರೇಣುಕಾ ಕುಸುಗಲ್, ಕಲಾವತಿ ಭೀಮಕ್ಕನವರ, ರೇಖಾ ನಾಯ್ಕರ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.