ಧಾರವಾಡ: ರಂಗಾಯಣವು ‘ನಮ್ಮ ಸಂವಿಧಾನ ನಮ್ಮ ಕಲರವ’ ಧ್ಯೇಯ ವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಗ್ರಾಮೀಣ ಬದುಕು ಹಾಗೂ ವ್ಯವಹಾರ ಜ್ಞಾನ ಪರಿಚಯಿಸಲು ಈಚೆಗೆ ‘ಮಕ್ಕಳ ಸಂತೆ’ ಏರ್ಪಡಿಸಿತ್ತು.
ಶೇಂಗಾ ಚಿಕ್ಕಿ, ಚುರುಮುರಿ, ಮಿರ್ಚಿ–ಗಿರಮಿಟ್, ಸಿಹಿತಿನಿಸು, ತರಕಾರಿ, ಚಿತ್ರಪಟ, ಕರಕುಶಲ ವಸ್ತುಗಳು, ಪುಸ್ತಕ, ಲೇಖನ ಸಾಮಗ್ರಿ ಮೊದಲಾದವುಗಳ ಮಾರಾಟ ಹಾಗೂ ಖರೀದಿ ಇಲ್ಲಿ ನಡೆಯಿತು. ವಿವಿಧ ವಸ್ತುಗಳನ್ನು ಮಕ್ಕಳು ಮಾರಾಟ ಮಾಡಿ, ಖರೀದಿಸಿ ಖುಷಿ ಪಟ್ಟರು.
ಪ್ರೇಮಾ ತಾಳಿಕೋಟಿ ಅವರು ‘ಮಕ್ಕಳ ಸಂತೆ’ಯ ಉದ್ಘಾಟನೆ ನೆರವೇರಿಸಿದರು. ವಕೀಲ ರಾಜೇಂದ್ರ ಪಾಟೀಲ, ಪ್ರಭು ಹಂಚಿನಾಳ, ಶಿಬಿರದ ನಿರ್ದೇಶಕ ಲಕ್ಷ್ಮಣ ಪೀರಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.