ADVERTISEMENT

ರೈತರ, ಜನರ ಸಮಸ್ಯೆಗೆ ಸ್ಪಂದಿಸದ ಧಾರವಾಡ ಜಿಲ್ಲಾಧಿಕಾರಿ: ವೀರೇಶ ಸೊಬರದಮಠ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:10 IST
Last Updated 13 ಜನವರಿ 2026, 5:10 IST
ದಿವ್ಯಪ್ರಭು, ಜಿಲ್ಲಾಧಿಕಾರಿ, ಧಾರವಾಡ
ದಿವ್ಯಪ್ರಭು, ಜಿಲ್ಲಾಧಿಕಾರಿ, ಧಾರವಾಡ   

ಧಾರವಾಡ: ‘ಜಿಲ್ಲಾಧಿಕಾರಿಯವರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರನ್ನು ವರ್ಗಾವಣೆ ಮಾಡುವಂತೆ ಮುಖ್ಯಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ’ ಎಂದು ರೈತ ಸೇನಾ ಕರ್ನಾಟಕ ಸಂಘಟನೆ ಅಧ್ಯಕ್ಷ ವೀರೇಶ ಸೊಬರದ ಮಠ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನವಲಗುಂದ ತಾಲ್ಲೂಕಿನ ತಿರ್ಲಾಪೂರದ ರೈತ ಸಿದ್ದಲಿಂಗಪ್ಪ ಶಿವಪ್ಪ ಗುಡಿ ಅವರ ಕಬ್ಜಾದಲ್ಲಿರುವ ಜಮೀನನ್ನು ಹೊಸ ಶರ್ತಿನಿಂದ ಹಳೆಯ ಶರ್ತಿಗೆ ಪರಿವರ್ತಿಸುವಂತೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ಕ್ರಮ ವಹಿಸಿಲ್ಲ’ ಎಂದು ದೂರಿದರು.

‘13 ವರ್ಷಗಳಿಂದ ಮನವಿಯನ್ನು ಪರಿಗಣಿಸಿಲ್ಲ. ಪುನಃ ಹೊಸ ಶರ್ತು ವಿಧಿಸಲಾಗಿದೆ’ ಎಂದು ದೂರಿದರು.

ADVERTISEMENT

‘ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಅರ್ಥಮಾಡಿಕೊಳ್ಳಬೇಕು. ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು’ ಎಂದರು.

ಮಲ್ಲಣ್ಣ ಅಲೇಕಾರ, ಸುಭಾಷ್‌ ಬಾಳೆಕಾಯಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.