ADVERTISEMENT

ನಾಲ್ಕು ಜನರಲ್ಲಿ ಸೋಂಕು: ನಾಲ್ವರಲ್ಲಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 15:23 IST
Last Updated 8 ಜೂನ್ 2020, 15:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ಕು ಕೋವಿಡ್–19 ಸೋಂಕು ಪ್ರಕರಣ ವರದಿಯಾಗಿದ್ದು, ಆಮೂಲಕ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ನಾಲ್ವರು ಗುಣಮುಖರಾಗಿದ್ದು ಇವರು ಭಾನುವಾರ ರಾತ್ರಿ ಕಿಮ್ಸ್‌ನಿಂದ ಬಿಡುಗಡೆಹೊಂದಿದ್ದಾರೆ.

ರಾಜಸ್ಥಾನದಿಂದ ಬಂದ ಹುಬ್ಬಳ್ಳಿಯ ಮಂಗಳವಾರಪೇಟೆ ನಿವಾಸಿಗಳಾದ 46 ವರ್ಷದ ಪುರುಷ (ಪಿ–5482), 42 ವರ್ಷದ ಮಹಿಳೆ (ಪಿ–5483), 14 ವರ್ಷದ ಬಾಲಕ (ಪಿ–5484) ಇವರಲ್ಲಿ ಸೋಂಕು ದೃಢಪಟ್ಟಿದೆ. ಹಾಗೆಯೇ ಹುಬ್ಬಳ್ಳಿಯ ಶಾಂತಿನಗರದ ವಿನಯ ಕಾಲೊನಿ ನಿವಾಸಿ 4 ವರ್ಷದ ಬಾಲಕಿ (ಪಿ–5485)ಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಾಲಕಿಯೊಂದಿಗೆ ಬಂದ ಇತರ ಮೂವರಲ್ಲೂ ಸೋಂಕು ಕಂಡುಬಂದಿತ್ತು.

ಅದರಂತೆಯೇ ಕೋವಿಡ್ ಸೋಂಕು ಮುಕ್ತರಾದ ನಾಲ್ಕು ಜನರನ್ನು ಭಾನುವಾರ ರಾತ್ರಿ ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮೇ 21ರಂದು ಕೋವಿಡ್ ಸೋಂಕು ದೃಢಪಟ್ಟಿದ್ದ ಉಪ್ಪಿನ ಬೆಟಗೇರಿಯ 9 ವರ್ಷದ ಬಾಲಕಿ (ಪಿ–1507), 24 ವರ್ಷದ ಮಹಿಳೆ (ಪಿ–1508) ಹಾಗೂ ಮೇ 16ರಂದು ಸೋಂಕು ದೃಢಪಟ್ಟಿದ್ದ ಧಾರವಾಡದ ಓಂನಗರ ನಿವಾಸಿ 34 ವರ್ಷದ ಪುರುಷ (ಪಿ–1060), ಮೇ 23ರಂದು ಸೋಂಕು ದೃಢಪಟ್ಟಿದ್ದ ಯಾಲಕ್ಕಿ ಶೆಟ್ಟರ್ ಕಾಲೊನಿಯ 51 ವರ್ಷದ ಪುರುಷ (ಪಿ–1913) ಸಂಪೂರ್ಣ ಗುಣಮುಖರಾಗಿದ್ದಾರೆ. ಇವರೆಲ್ಲರೂ ಮಹಾರಾಷ್ಟ್ರ ರಾಜ್ಯದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

ADVERTISEMENT

ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 38 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.