ಧಾರವಾಡದ ಸಂಪಿಗೆ ನಗರದ ದ್ವಿಪಥ
ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡ: ಉದ್ಯಾನ ಅಭಿವೃದ್ಧಿ, ಮಳೆ ನೀರು ಸಂಗ್ರಹ, ರಸ್ತೆ ಡಾಂಬರೀಕರಣ, ಗಟಾರ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳು ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ ವಿವಿಧೆಡೆ ನಡೆದಿವೆ. ಮೂಲಸೌಲಭ್ಯ, ವಾರ್ಡ್ ಅಭಿವೃದ್ಧಿ ಕಡೆಗೆ ಪ್ರಯತ್ನ ಸಾಗಿದೆ.
ಈ ವಾರ್ಡ್ ವಿಸ್ತೀರ್ಣದಲ್ಲಿ ದೊಡ್ಡದು. ಉದ್ಯಾನಗಳು, ಗಿಡಮರಗಳ ಸೊಬಗು, ವಿಸ್ತಾರವಾದ ರಸ್ತೆಗಳು ಇಲ್ಲಿನ ವೈಶಿಷ್ಟ್ಯಗಳು. ಸಂಪಿಗೆ ನಗರ/ ಬೇಂದ್ರೆ ನಗರದಲ್ಲಿ ವ್ಯವಸ್ಥಿತ ಬಸ್ ನಿಲ್ದಾಣ ಇದೆ.
‘15ನೇ ಹಣಕಾಸು ಆಯೋಗದ ಅನುದಾನದಡಿ ₹1 ಕೋಟಿ ವೆಚ್ಚದಲ್ಲಿ ಕೆಎಚ್‌ಬಿ ಕಾಲೊನಿಯ (ಸಹ್ಯಾದ್ರಿ ನಗರ) ಉದ್ಯಾನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ₹1 ಕೋಟಿ ವೆಚ್ಚದಲ್ಲಿ ಸುಂದರ ನಗರ, ಆತ್ಮಾನಂದ ನಗರದಲ್ಲಿ ಗಟಾರ ನಿರ್ಮಾಣ ನಡೆಯುತ್ತಿದೆ’ ಎಂದು ಪಾಲಿಕೆ ಸದಸ್ಯೆ (ವಾರ್ಡ್1) ಅನಿತಾ ಚಳಗೇರಿ ತಿಳಿಸಿದರು.
‘ಗುಲಗಂಜಿ ಕೊಪ್ಪದ ಸ್ಮಶಾನ ದಲ್ಲಿ ₹1 ಕೋಟಿ ವೆಚ್ಚದಲ್ಲಿ ಮಳೆ ನೀರು ಸಂಗ್ರಹದ ಕಾಮಗಾರಿ ನಡೆಯುತ್ತಿದೆ. ₹16 ಲಕ್ಷ ವೆಚ್ಚದಲ್ಲಿ ವಿಕಾಸನಗರದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಜನರು ಸಮಸ್ಯೆಗಳನ್ನು ನೇರವಾಗಿ , ಫೋನ್ ಮೂಲಕ ಗಮನಕ್ಕೆ ತರುತ್ತಾರೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತೇನೆ’ ಎಂದು ಅವರು ತಿಳಿಸಿದರು.
ನಿವೇಶನಗಳು, ರಸ್ತೆ ಬದಿಗಳಲ್ಲಿ ಕಸ ಎಸೆಯುವ ಪರಿಪಾಟ ಇದೆ. ಸಾಧನಾ ಕೇರಿ ಕೆರೆಗೆ ಚರಂಡಿ ನೀರು ಸೇರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ.
‘ಪ್ರತಿದಿನ ಕಸ ಸಂಗ್ರಹ ವಾಹನ ಬರುವಂತೆ ಮಾಡಬೇಕು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ವ್ಯವಸ್ಥಿತವಾಗಿ ಗಟಾರಗಳನ್ನು ನಿರ್ಮಿಸಬೇಕು. ವಾರ್ಡ್‌ನಲ್ಲಿನ ಎಲ್ಲ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳಾಗಿಸಲು ಕ್ರಮ ವಹಿಸಬೇಕು’ ಎಂದು ಸರೋವರ ನಗರ ನಿವಾಸಿ ಶಾಂತಮ್ಮ ಹಿರೇಮಠ ಒತ್ತಾಯಿಸಿದರು.
l ಪ್ರತಿನಿತ್ಯ ನೀರು ಪೂರೈಕೆ
l ನಿಯಮಿತವಾಗಿ ಕಸ ವಿಲೇವಾರಿ, ಹೆಚ್ಚುವರಿ ವಾಹನ ವ್ಯವಸ್ಥೆ
l ಗಟಾರಗಳ ನಿರ್ವಹಣೆ, ಸ್ವಚ್ಛತೆ l ಬೀದಿ ದೀಪ; ಎಲ್‌ಇಡಿ ಬಲ್ಬ್ ಅಳವಡಿಕೆ
ಪ್ರಮುಖ ಬಡಾವಣೆಗಳು
ದೊಡ್ಡನಾಯಕನ ಕೊಪ್ಪ, ಸಂಪಿಗೆ ನಗರ, ಬೇಂದ್ರೆ ನಗರ, ಪೊಲೀಸ್ ಹೆಡ್ ಕ್ವಾರ್ಟ್ರಸ್, ಬನಶ್ರೀನಗರ, ಸರೋವರ ನಗರ, ಮಲಪ್ರಭಾ ನಗರ, ಮಹಾಂತೇಶ ನಗರ, ಆದರ್ಶನಗರ, ಸುಂದರನಗರ, ಆತ್ಮಾನಂದ ನಗರ, ವಿಕಾಸ ನಗರ, ಓಂ ನಗರ, ಸಿದ್ಧಾರ್ಥ ಕಾಲೊನಿ, ಗುಲಗಂಜಿಕೊಪ್ಪ, ಸಿ.ಬಿ.ನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.