ಹುಬ್ಬಳ್ಳಿ: ‘ಉದ್ಯಮಿ ಆಗಲು ಶಿಸ್ತು, ಸಮಯಪ್ರಜ್ಞೆ, ಉತ್ಸಾಹ ಇರಬೇಕು. ಮೌಲ್ಯಗಳನ್ನು ಹೊಂದಿರಬೇಕು. ಉತ್ತಮ ಸಂಪರ್ಕ ಬೆಳೆಸಿಕೊಳ್ಳಬೇಕು’ ಎಂದು ನವೋದ್ಯಮಿ ಥಿರೇಸನ್ ಮಹೇಂದ್ರನ್ ಹೇಳಿದರು.
ಇಲ್ಲಿನ ವಿದ್ಯಾನಗರದ ಕೆಎಲ್‌ಇ ಐಎಂಎಸ್‌ಆರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಟಾರ್ಟ್‌ಅಪ್ ಫೆಸ್ಟ್ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಯಮಿ ವಿಘ್ನೇಶ್ವರನ್ ಮಾತನಾಡಿ, ‘ಉದ್ಯಮಶೀಲತೆಗೆ ಶೈಕ್ಷಣಿಕ ಅರ್ಹತೆಯೂ ಮುಖ್ಯ. ಉತ್ತಮ ಶಿಕ್ಷಣ ಪಡೆಯಬೇಕು. ಇತರ ದೃಷ್ಟಿಕೋನಗಳ ಬಗ್ಗೆ ಗಮನಹರಿಸದೆ ಗುರಿ ಸಾಧನೆಗೆ ಸದಾ ಪ್ರಯತ್ನಿಸಬೇಕು’ ಎಂದು ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ನಿರ್ವಹಣಾ ಮಂಡಳಿಯ ಸದಸ್ಯ ಎಸ್.ಐ. ಮುನವಳ್ಳಿ ಮಾತನಾಡಿದರು. ಐಎಂಎಸ್‌ಆರ್ ನಿರ್ದೇಶಕ ರಾಜೇಂದ್ರಪ್ರಸಾದ ಕೆ.ಎಚ್., ಕಾರ್ಯಕ್ರಮ ಸಂಯೋಜಕ ಅಮಿತ್ ಅಂಗಡಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.