ADVERTISEMENT

ವೈದ್ಯರ ಸೇವೆ ಸ್ಮರಣೀಯ: ಮುಲ್ಕಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 2:01 IST
Last Updated 16 ಮಾರ್ಚ್ 2022, 2:01 IST
ಸನಾ ಶಾಹೀನ್‌ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಎಂಬಿಬಿಎಸ್‌ ಕಾಲೇಜಿನಲ್ಲಿ ಸೀಟು ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಮಂಗಳವಾರ ಸನ್ಮಾನ ಮಾಡಲಾಯಿತು
ಸನಾ ಶಾಹೀನ್‌ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಎಂಬಿಬಿಎಸ್‌ ಕಾಲೇಜಿನಲ್ಲಿ ಸೀಟು ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಮಂಗಳವಾರ ಸನ್ಮಾನ ಮಾಡಲಾಯಿತು   

ಹುಬ್ಬಳ್ಳಿ: ‘ಕೊರೊನಾ ಸೋಂಕು ವ್ಯಾಪಕವಾಗಿದ್ದ ಸಂದರ್ಭದಲ್ಲಿ ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ. ಕಿಮ್ಸ್‌ನ ವೈದ್ಯರು ಗಣನೀಯ ಸೇವೆ ಸಲ್ಲಿಸಿದ್ದಾರೆ ’ ಎಂದು ಐಎಂಎ ಅಧ್ಯಕ್ಷ ಎಸ್‌.ವೈ.ಮುಲ್ಕಿ ಪಾಟೀಲ ಹೇಳಿದರು.

2021–22ನೇ ಸಾಲಿನಲ್ಲಿ ವಿವಿಧ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ಗಳಿಸಿದ ಸನಾ ಶಾಹೀನ್‌ ಪಿಯು ಕಾಲೇಜಿನ ಆರು ಜನ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‌

‘ರೈಲ್ವೆ ದುರಂತದಲ್ಲಿ ಕಾಲು ಕಳೆದುಕೊಂಡ ಡಾ.ರೋಷನ್ ಜಹಾನ್ ಶೇಖ್ ಅವರು ಸವಾಲುಗಳನ್ನು ಗೆದ್ದು ವೈದ್ಯರಾಗಿದ್ದಾರೆ. ಅಲ್ಲದೆ, ನೂರಾರು ಜನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ’ ಎಂದು ಹೇಳಿದರು. ‌

ADVERTISEMENT

ಚೇರ್ಮನ್‌ ಎಂ.ಎಂ ಮಳಗಿ, ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹ್ಮದ್, ಮೊಹಮ್ಮದ್‌ತಬ್ರೇಜ್ ಶೇಖ್, ಅಫೀಫಾ ಶೇಖ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.