ADVERTISEMENT

ರಫೇಲ್‌: ಜಂಟಿ ಸದನ ಸಮಿತಿ ತನಿಖೆಗಾಗಿ ಡಿಪಿ ಬದಲು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 15:47 IST
Last Updated 16 ಡಿಸೆಂಬರ್ 2018, 15:47 IST
ಕಾಂಗ್ರೆಸ್‌ ಸದಸ್ಯರ ವಾಟ್ಸ್‌ ಆ್ಯಪ್‌ ಡಿಪಿಯಾದ ಜೆಪಿಸಿ ರಚನೆಯ ಬೇಡಿಕೆ
ಕಾಂಗ್ರೆಸ್‌ ಸದಸ್ಯರ ವಾಟ್ಸ್‌ ಆ್ಯಪ್‌ ಡಿಪಿಯಾದ ಜೆಪಿಸಿ ರಚನೆಯ ಬೇಡಿಕೆ   

ಹುಬ್ಬಳ್ಳಿ: ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ಕುರಿತು ಜಂಟಿ ಸದನ ಸಮಿತಿ ತನಿಖೆ (ಜೆಪಿಸಿ)ಗೆ ಒತ್ತಾಯಿಸಲು ಕಾಂಗ್ರೆಸ್ ಸದಸ್ಯರು ತಮ್ಮ ವಾಟ್ಸ್‌ ಆ್ಯಪ್‌ಗಳ ಡಿಪಿಗಳನ್ನು ಬದಲಿಸಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ಹಾದಿ ತಪ್ಪಿಸಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದಾದ ಬಳಿಕ ಕಾಂಗ್ರೆಸ್‌ ಐಟಿ ಸೆಲ್‌ ಸದಸ್ಯರು ಕೇಸರಿ ಬಿಳಿ ಹಸಿರು ಬಣ್ಣಗಳಲ್ಲಿ I SUPPORT JPC FOR RAFALE SCAM ಎಂದು ಬರೆದುಕೊಂಡಿದ್ದನ್ನು ಡಿಪಿಯನ್ನಾಗಿ ಅಳವಡಿಸಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್‌ ಐಟಿ ಸೆಲ್‌ ಸದಸ್ಯ ರಜತ್ ಉಳ್ಳಾಗಡ್ಡಿಮಠ, ‘ಕೇಂದ್ರ ಸರ್ಕಾರ ರಫೇಲ್‌ ವಿಚಾರದಲ್ಲಿ ಸಾಕಷ್ಟು ವಿಷಯಗಳನ್ನು ಸಾರ್ವಜನಿಕರಿಗೆ ಹೇಳುತ್ತಿಲ್ಲ. ನ್ಯಾಯಾಲಯದ ಹಾದಿಯನ್ನೂ ತಪ್ಪಿಸಿದೆ. ಹೀಗಾಗಿ, ಜಂಟಿ ಸದನ ಸಮಿತಿಯಿಂದಲೇ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್‌ ಒತ್ತಾಯ. ಹಾಗಾಗಿ, ನಮ್ಮ ವಾಟ್ಸ್‌ ಆ್ಯಪ್‌ ಹಾಗೂ ಫೇಸ್‌ಬುಕ್‌ ಡಿಪಿಗಳನ್ನು ಬದಲಿಸಿಕೊಳ್ಳುತ್ತಿದ್ದೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.