ADVERTISEMENT

ಡಾ. ಮಲ್ಲಿಕಾರ್ಜುನ ಮನಸೂರರ 28ನೇ ಪುಣ್ಯಸ್ಮರಣೆ: ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 8:25 IST
Last Updated 12 ಸೆಪ್ಟೆಂಬರ್ 2020, 8:25 IST
ಡಾ. ಮನಸೂರ ಅವರ ಸಮಾಧಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಶನಿವಾರ ಪೂಜೆ ಸಲ್ಲಿಸಿದರು.
ಡಾ. ಮನಸೂರ ಅವರ ಸಮಾಧಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಶನಿವಾರ ಪೂಜೆ ಸಲ್ಲಿಸಿದರು.   

ಧಾರವಾಡ: ಹಿಂದೂಸ್ತಾನಿ ಸಂಗೀತದ ದಿಗ್ಗಜ ಡಾ. ಮಲ್ಲಿಕಾರ್ಜುನ ಮನಸೂರ ಅವರ 28 ನೇ ಪುಣ್ಯಸ್ಮರಣೆ ನಿಮಿತ್ತ ಡಾ. ಮನಸೂರ ಅವರ ಸಮಾಧಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಶನಿವಾರ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಶಿವಾನಂದ ಕರಾಳೆ, ಡಾ.ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯಸ್ಮರಣೆ ನಿಮಿತ್ಯ ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಸಂಗೀತೋತ್ಸವವನ್ನು ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮುಂದೂಡಲಾಗಿದೆ.

ಕಾರ್ಯಕ್ರಮಗಳನ್ನು ರದ್ದುಪಡಿಸಿ, ಅತ್ಯಂತ ಸರಳವಾಗಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಟ್ರಸ್ಟ್ ಸದಸ್ಯರ ಆಶಯದಂತೆ ಸಂಗೀತೋತ್ಸವವನ್ನು ಮುಂದುವರೆಸಲಾಗುವುದು. ಡಾ.ಮಲ್ಲಿಕಾರ್ಜುನ ಮನಸೂರವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಷ್ಟ್ರೀಯ ಸ್ಮಾರಕ ಟ್ರಸ್ಟನ್ನು 1997ರಲ್ಲಿಯೇ ರಚಿಸಿದೆ. ಟ್ರಸ್ಟ್ ವತಿಯಿಂದ ಅವರು ವಾಸವಿದ್ದ ಮನೆಯನ್ನು ನವೀಕರಿಸಿರಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಹಿಂದೂಸ್ತಾನಿ ಸಂಗೀತವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಂಗೀತ ಶಾಲೆ ಪ್ರಾರಂಭಿಸಿದೆ ಎಂದು ಹೇಳಿದರು.

ADVERTISEMENT

ಉಪ ವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ, ಟ್ರಸ್ಟ್ ಸದ್ಯಸರಾದ ಪದ್ಮಶ್ರೀ ಡಾ.ಎಂ.ವೆಂಕಟೇಶ್ ಕುಮಾರ್,ನೀಲಾ ಎಂ. ಕೊಡ್ಲಿ,ಡಾ.ದಿಲೀಪ್ ದೇಶಪಾಂಡೆ,ಶಂಕರ ಕುಂಬಿ, ಭಾಗವಹಿಸಿದ್ದರು, ಪ್ರಕಾಶ ಬಾಳಿಕಾಯಿ,ಡಾ.ಚಂದ್ರಿಕಾ ಕಾಮತ್,ಚಂದ್ರಕಾಂತ ಆಲೂರ,ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಂಜುಳಾ ಯಲಿಗಾರ ಇದ್ದರು.

ಮಲ್ಲಿಕಾರ್ಜುನ ಮನಸೂರ ಅವರ ಮರಿ ಮೊಮ್ಮಗಳಾದ ಮಾನಸ ಆಲೂರ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲಮಪ್ರಭು ಕಡಕೋಳ, ಪರಶುರಾಮ ಕಟ್ಟಿಸಂಗಾವಿ ವಾದ್ಯ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.