ADVERTISEMENT

ಆರೋಗ್ಯ, ಕೃಷಿ ಕ್ಷೇತ್ರಕ್ಕೆ ಒತ್ತು: ಆರ್.ಆರ್. ಬಿರಾದಾರ

ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಬಜೆಟ್‌ ಬಗ್ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 16:29 IST
Last Updated 4 ಫೆಬ್ರುವರಿ 2021, 16:29 IST
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಆರ್.ಆರ್. ಬಿರಾದಾರ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಆರ್.ಆರ್. ಬಿರಾದಾರ ಮಾತನಾಡಿದರು   

ಹುಬ್ಬಳ್ಳಿ: ಕೋವಿಡ್ ಮತ್ತು ಲಾಕ್‌ಡೌನ್‌ ಪರಿಣಾಮದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೂ, ಈ ಸಲದ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಹಾಗೂ ಪ್ರಾಧ್ಯಾಪಕಆರ್.ಆರ್. ಬಿರಾದಾರ ಹೇಳಿದರು.

ಎಸ್.ಜೆ.ಎಂ.ವಿ.ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಬಜೆಟ್‌ ಪ್ರಭಾವ ಮತ್ತು ಪರಿಣಾಮಗಳು ಕುರಿತು ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ’ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಕೈಗಾರಿಕೆ ಸೇರಿದಂತೆ ಎಲ್ಲ ಚಟುವಟಿಕೆಗಳು ಸ್ತಬ್ದವಾದವು. ಇದರಿಂದಾಗಿ ಸರ್ಕಾರಕ್ಕೆ ಬರಬೇಕಿದ್ದ ಆದಾಯ ನಿಂತು ಹೋಯಿತು. ದೇಶದ ಒಟ್ಟು ವರಮಾನವೂ ಕುಸಿಯಿತು. ಇದನ್ನು ಸರಿದೂಗಿಸಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ವಿತ್ತ ಸಚಿವರು ಪ್ರಯತ್ನಿಸಿದ್ದಾರೆ’ ಎಂದರು.

ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಸದಸ್ಯರೂ ಆದ ಬಿರಾದಾರ ಬಜೆಟ್‌ ಎಂದರೇನು? ಅದನ್ನು ಮಂಡಿಸಲು ಇರುವ ಮಾನದಂಡಗಳು, ಯೋಜನಾ ವೆಚ್ಚ, ಬಜೆಟ್‌ ತಯಾರಿ ಹೇಗಿರುತ್ತದೆ ಎನ್ನುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.

ADVERTISEMENT

ಕಾಲೇಜಿನ ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ ಮಾತನಾಡಿ ‘ದೇಶದ ಎಲ್ಲ ವಲಯಗಳಿಗೆ ಪ್ರೋತ್ಸಾಹ ನೀಡಲು ಬಜೆಟ್‌ ಅತಿ ಪರಿಣಾಮಕಾರಿಯಾಗಿದೆ’ ಎಂದರು.

ಪ್ರೊ. ಶಿವಕುಮಾರ್ ಪ್ರಭಯ್ಯನವರಮಠ, ಡಾ. ತಾಯಣ್ಣ ಎಚ್. ಆಯೇಷಾ ಲುಕಮನ್, ವಿನಯಾ ಕಟಿಗಾರ, ಪ್ರೀತಿ ಮಠಪತಿ, ಡಾ. ಗುರುರಾಜ ನವಲಗುಂದ, ಡಾ. ಸುಪ್ರಿಯಾ ಮಲಶೆಟ್ಟಿ, ಪ್ರೊ. ಶಿವಕುಮಾರ ಬನ್ನಿಹಟ್ಟಿ, ಡಾ. ಮಹದೇವ ಹರಿಜನ, ಪ್ರೊ. ಶಶಾಂಕ, ಪ್ರೊ. ಗಿರೀಶ ಕುಲಕರ್ಣಿ, ಪ್ರೊ. ಲಕ್ಷ್ಮಿ ತಿಮ್ಮನಗೌಡರ, ಪ್ರೊ. ಮೇಧಾ ಗೋಡಬೋಲೆ, ಪ್ರೊ. ಮಂಜುಳಾ ಹಿತ್ತಲಮನಿ, ಪ್ರೊ.ಸ್ನೇಹಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.