ADVERTISEMENT

ಎಪಿಕ್‌ ಕಾರ್ಡ್‌ ಮಾದರಿಯಲ್ಲಿ ಲಗ್ನಪತ್ರಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 15:09 IST
Last Updated 16 ಏಪ್ರಿಲ್ 2019, 15:09 IST
ಎಪಿಕ್‌ ಕಾರ್ಡ್‌ ಮಾದರಿಯಲ್ಲಿರುವ ಮದುವೆ ಆಮಂತ್ರಣ
ಎಪಿಕ್‌ ಕಾರ್ಡ್‌ ಮಾದರಿಯಲ್ಲಿರುವ ಮದುವೆ ಆಮಂತ್ರಣ   

ಹುಬ್ಬಳ್ಳಿ: ಜನರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಸಾಕಷ್ಟು ಜನ ಹತ್ತಾರು ರೀತಿಯಲ್ಲಿ ಕಸರತ್ತು ಮಾಡುತ್ತಿದ್ದಾರೆ. ಅದರಲ್ಲಿ ‘ಹೂಗಾರ ಬಂಧುಗಳ ಮದುವೆ ಸಮಾರಂಭ’ದ ಆಮಂತ್ರಣ ಪತ್ರಿಕೆ ಸಾಮಾಜಿಕ ತಾಣದಲ್ಲಿ ಗಮನ ಸೆಳೆಯುತ್ತಿದೆ.

ಏ. 26ರಂದು ಡಾ. ಕೆ.ಎಸ್‌. ಶರ್ಮಾ ಕಲ್ಯಾಣ ಮಂಟಪದಲ್ಲಿ ನಡೆಯುವ ಅನ್ನಪೂರ್ಣ ಹಾಗೂ ಸುನೀಲ ಅವರ ಮದುವೆ ಆಮಂತ್ರಣವನ್ನು ಎಪಿಕ್‌ ಕಾರ್ಡ್‌ ಮಾದರಿಯಲ್ಲಿ ರೂಪಿಸಲಾಗಿದೆ. ಕಾರ್ಡ್‌ನಲ್ಲಿ ಮದುವೆಯ ಸಮಯ, ಸ್ವಾಗತ ಕೋರುವವರು, ಸುಖಾಗಮನ ಬಯಸುವವರು ಹೀಗೆ ಎಲ್ಲ ಮಾಹಿತಿ ಇದೆ.

ಕಾರ್ಡ್‌ನ ಹಿಂಭಾಗದಲ್ಲಿ ‘ಜೀವ ಉಳಿಸಲು ರಕ್ತದಾನ, ದೇಶ ಕಟ್ಟಲು ಮತದಾನ. ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ’ ಎನ್ನುವ ಸಂದೇಶ ಬರೆಯಲಾಗಿದೆ. ಭಾವಚಿತ್ರದ ಜಾಗದಲ್ಲಿ ವಿವಾಹವಾಗುವರ ಫೋಟೊ ಹಾಕಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.