ADVERTISEMENT

ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ದಾರಿದೀಪ: ಎಸ್.ವಿ. ಬಡಿಗೇರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:23 IST
Last Updated 17 ಜೂನ್ 2025, 15:23 IST
ನವಲಗುಂದ ಶಂಕರ ಮಹಾವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು
ನವಲಗುಂದ ಶಂಕರ ಮಹಾವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು   

ನವಲಗುಂದ: ‘ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ದಾರಿದೀಪ. ಬದುಕಿನ ನಿಜವಾದ ಯಶಸ್ಸು ಎಂದರೆ ಸಂತೋಷವಾಗಿರುವುದು’ ಎಂದು ಶಂಕರ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ವಿ. ಬಡಿಗೇರ ಹೇಳಿದರು.

ಮಹಾವಿದ್ಯಾಲಯದ ಐಕ್ಯುಎಸಿ ವತಿಯಿಂದ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ಸಮಾರೋಪ, ವಾರ್ಷಿಕ ಸ್ನೇಹ ಸಮ್ಮೇಳನ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆ ಹಾಗೂ ಕುಪ್ಪಸ ಧರಿಸಿ ಎತ್ತಿನ ಚಕ್ಕಡಿಯಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಸಂಚರಿಸಿ ಸಂಪ್ರದಾಯವನ್ನು ಬಿಂಬಿಸಿದರು.

ADVERTISEMENT

ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಎ.ಜಿ. ಜಕ್ಕನಗೌಡ್ರ, ಸಾಂಸ್ಕೃತಿಕ ಸಂಘದ ಕಾರ್ಯಾಧ್ಯಕ್ಷ ಎಂ.ಎನ್. ಹಾರೋಗೇರಿ, ಪ್ರಾಧ್ಯಾಪಕರಾದ ಶೀಲಾ ತುಬಚಿ, ಪಿ.ಜಿ. ಕೊಪ್ಪದ, ಆರ್.ಪಿ. ಚವ್ಹಾಣ, ರುದ್ರಮುನಿ ಹಿರೇಮಠ, ಬಿ.ಕೆ. ಬಂಕಾಪುರ, ಜಿ.ಎಸ್. ಚಿಣಗಿ, ಎಂ.ವಿ. ಹೊಳೆಯಣ್ಣವರ, ಬಿ.ಕೆ. ಮಹೇಶ, ದಾವಲಸಾಬ ಕಲ್ಬುರ್ಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.