ADVERTISEMENT

ಮಕ್ಕಳಿಗೆ ವೇಷಭೂಷಣ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 4:36 IST
Last Updated 30 ನವೆಂಬರ್ 2022, 4:36 IST
ಹುಬ್ಬಳ್ಳಿಯ ಗುರುದೇವ ನಗರದ ಅಂಕುರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳು ವಿವಿಧ ವೇಷಗಳಲ್ಲಿ ಗಮನ ಸೆಳೆದರು
ಹುಬ್ಬಳ್ಳಿಯ ಗುರುದೇವ ನಗರದ ಅಂಕುರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳು ವಿವಿಧ ವೇಷಗಳಲ್ಲಿ ಗಮನ ಸೆಳೆದರು   

ಹುಬ್ಬಳ್ಳಿ: ಇಲ್ಲಿನ ಗುರುದೇವ ನಗರದಲ್ಲಿರುವ ಅಂಕುರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ–2022 ಇತ್ತೀಚೆಗೆ ನಡೆಯಿತು. ಪ್ಲೇ ಹೋಂ,ನರ್ಸರಿ, ಎಲ್‌ಕೆಜಿಹಾಗೂಯುಕೆಜಿ ಮಕ್ಕಳಿಗೆ ಸ್ಪರ್ಧೆ ನಡೆಯಿತು.

ಪ್ಲೇ ಹೋಂ ಮಕ್ಕಳ ಸ್ಪರ್ಧೆಯಲ್ಲಿ ಶ್ರೇಯಸ್ ಡಿ. ಪ್ರಥಮ, ಅಶಸ್ವಿ ಬಿ. ದ್ವಿತೀಯ, ತಕ್ಷ್ವಿ ತೃತೀಯ, ನರ್ಸರಿಯಲ್ಲಿ ಪುನರ್ವಿ ಬಿ.ಎಂ ತನುಷ್ಕಾ, ಆರುಷ್ ಎನ್. ಕ್ರಮವಾಗಿ ಮೂರು ಸ್ಥಾನ ಪಡೆದರು. ಎಲ್‌ಕೆಜಿಯಲ್ಲಿ ಏಕತಾ ಎಂ. ಪ್ರಥಮ, ಕಿಶನ್ ಸಿ.ಎಂ. ದ್ವಿತೀಯ, ಓಂ ಮುತ್ತಲ್ ಮತ್ತು ಗೌತಮಿ ಎನ್. ತೃತೀಯ ಹಾಗೂ ಯುಕೆಜಿಯಲ್ಲಿ ಮಂಜುನಾಥ್ ಎಸ್.ವಿ ಪ್ರಥಮ, ಅಭಿನವ್ ಕೆ. ದ್ವಿತೀಯ ಹಾಗೂ ಜಗನ್ನಾಥ್ ಪಿ. ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರೀಯ ವಿದ್ಯಾಲಯದ ನಿವೃತ್ತ ಮುಖ್ಯ ಶಿಕ್ಷಕಿ ರಾಧಾ ಸಾಂಬ್ರಾಣಿ, ಸವಣೂರಿನ ಸರ್ಕಾರಿ ಪಿಯು ಕಾಲೇಜಿನ ಗ್ರಂಥಪಾಲಕಿ ಡಾ. ಗೀತಾ ಕುಲಕರ್ಣಿ ಹಾಗೂ ಮಂಜುಳಾ ವೀಣಾ ಭಾಗವಹಿಸಿದ್ದರು.ವಿಜೇತರಿಗೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ADVERTISEMENT

ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ ಕಕ್ಕನವರ, ಶಿಕ್ಷಕಿಯರಾದ ರಶ್ಮಿ ಶಿಗ್ಗಾವ, ದ್ವಾರಕಾಕುಲಕರ್ಣಿ, ಶೋಭಾ ಜಾವೂರ, ರತ್ನಾ ಪಟ್ಟೇದ ಹಾಗೂ ವಿಜಯಲಕ್ಷ್ಮಿ ಗೋಥೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.