
ಕುಂದಗೋಳ: ತಾಲ್ಲೂಕಿನ ಮೆಣಸಿನಕಾಯಿ ಖಾರದ ರುಚಿಗೆ ಪ್ರಸಿದ್ಧಿ. ಈಚಿನ ವರ್ಷಗಳಲ್ಲಿ ಬೆಳೆ ಕಡಿಮೆಯಾಗಿತ್ತು. ಈ ವರ್ಷ ಬೆಲೆ ಹೆಚ್ಚಳದಿಂದ ಮೆಣಸಿನಕಾಯಿ ಬೆಳೆಯನ್ನು ರೈತರು ಕಾವಲು ಕಾಯುವಂತಾಗಿದೆ.
ತಾಲ್ಲಾಕಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಮೆಣಸಿನಕಾಯಿ ಬೆಳೆಗೆ ಅತ್ರೋಕ್ಲೋಜ್ ರೋಗ ಹಾಗೂ ಅತಿಯಾದ ಮಳೆಯಿಂದ ಭರಪೂರ ಬಂದಿದ್ದ ಬೆಳೆ ಹಾಳಾಗಿದ್ದರಿಂದ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ನಂತರ ಅದು ಬದಲಾಯಿತು.
ತಾಲ್ಲೂಕಿನಲ್ಲಿ ಈ ವರ್ಷ 1620.9 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಕುಬಿಹಾಳ, ಇಂಗಳಗಿ, ಯಲಿವಾಳ, ಪಶುಪತಿಹಾಳ, ಗುಂಜಳ, ಕಳಸ, ಸುಲ್ತಾನಪೂರ ಯರೆಬೀದಿಹಾಳ ಕುಂದಗೋಳ, ದೇವನೂರ ಭಾಗಗಳಲ್ಲಿ ಹೆಚ್ಚಾಗಿ ಬೆಳೆ ಬೆಳೆದಿದ್ದಾರೆ.
ಈಗ ಪ್ರತಿ ಕ್ವಿಂಟಾಲ್‌ಗೆ ₹40 ಸಾವಿರದಿಂದ ದಿಂದ ₹65 ಸಾವಿರದವರೆಗೆ ದರ ಇದ್ದದರಿಂದ ಕಳ್ಳರು ಬೆಳೆ ಕದಿಯಬಹುದು ಎಂದು ಬೆಳೆ ರಕ್ಷಿಸಿಕೊಳ್ಳಲು ಹೊಲದಲ್ಲಿ ಗುಡಿಸಲು ಹಾಕಿ ನಿರಂತರವಾಗಿ ರೈತರು ಕಾವಲು ಮಾಡುತ್ತಿದ್ದಾರೆ.
ತಾಲ್ಲೂಕಿನಲ್ಲಿ ಕುಂದಗೋಳ, ಗುಡಗೇರಿ ಎರಡು ಪೊಲೀಸ್ ಠಾಣೆಗಳಿದ್ದು ಇದುವರೆಗೂ ಯಾವುದೇ ಮೆಣಸಿನಕಾಯಿ ಕಳುವಿನ ಪ್ರಕರಣ ದಾಖಲಾಗಿಲ್ಲ. ಮೊದಲೇ ಮುಂಗಾರು ಬೆಳೆ ಹಾಳಾಗಿದ್ದು ಕಷ್ಟದಲ್ಲಿರುವ ರೈತರಿಗೆ ಮೆಣಸಿನಕಾಯಿಗೆ ಉತ್ತಮ ದರ ಲಬಿಸುವ ಆಶಾಭಾವನೆಯಲ್ಲಿ ಕಾವಲು ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.