ADVERTISEMENT

ಧಾರವಾಡ: ತೊಟ್ಟಿಗೆ ಬಿದ್ದ ಜಿಂಕೆಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 13:20 IST
Last Updated 13 ಫೆಬ್ರುವರಿ 2023, 13:20 IST
   

ಧಾರವಾಡ: ಬಾಯಾರಿಕೆ ತಣಿಸಿಕೊಳ್ಳಲು ನೀರು ಅರಸಿ ಬಂದು ತೊಟ್ಟಿಗೆ ಬಿದ್ದಿದ್ದ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ರಕ್ಷಿಸಿದ್ದಾರೆ.

ದಾಹ ನೀಗಿಸಿಕೊಳ್ಳಲು ಬಂದ ಜಿಂಕೆ ಮರಿಯು ಇಲ್ಲಿನ ಸತ್ತೂರಿನಲ್ಲಿರುವ ಶ್ರೀಯಾ ಕಾಲೇಜಿನ ಆವರಣದಲ್ಲಿರುವ ತೊಟ್ಟಿಗೆ ಬಿದ್ದಿದಿದೆ. ಸ್ಥಳೀಯರು ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ಮುಟ್ಟಿಸಿದರು. ಸ್ಥಳಕ್ಕೆ ಬಂದ ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ ಲಮಾಣಿ, ಪ್ರಾಣಿ ಪ್ರಿಯ ಸೋಮಶೇಖರ ಚೆನ್ನಶೆಟ್ಟಿ ಹಾಗೂ ವೈದ್ಯ ಡಾ. ಸತೀಶ ಇರಕಲ್ ಅವರು ಜಿಂಕೆ ಮರಿಯನ್ನು ರಕ್ಷಿಸಿದರು.

‘ರಕ್ಷಿಸಿದ ಜಿಂಕೆಯನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ’ ಲಮಾಣಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.