ADVERTISEMENT

ಐವರು ‘ಕಥಾ ಪುರಸ್ಕಾರ’ಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 3:09 IST
Last Updated 30 ಜನವರಿ 2022, 3:09 IST
ದಯಾನಂದ
ದಯಾನಂದ   

ಹುಬ್ಬಳ್ಳಿ: ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಕನ್ನಡದ ಕಥಾ ಪರಂಪರೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಿದ್ದ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಐದು ಜನ ಕಥೆಗಾರರು ‘ಕಥಾ ಪುರಸ್ಕಾರ–2022’ಕ್ಕೆ ಆಯ್ಕೆಯಾಗಿದ್ದಾರೆ.

ತುಮಕೂರು ಜಿಲ್ಲೆ ವಕ್ಕೋಡಿಯ ಮಲ್ಲಿಕಾರ್ಜುನ ಹೊಸಪಾಳ್ಯ (ಪ್ರತೀಕಾರ), ಮೈಸೂರಿನ ಆನಂದ ಕುಂಚನೂರ (ಜಾಡು), ಬೆಂಗಳೂರಿನ ದಯಾನಂದ (ಪುರುಷನ ಬುಟ್ಟಿಯೊಳಿಟ್ಟು), ಕುಣಿಗಲ್‌ ತಾಲ್ಲೂಕಿನ ಬೀರಗಾನಹಳ್ಳಿಯ ಎಡೆಯೂರು ಪಲ್ಲವಿ (ಕುಂಡದ ಬೇರು) ಮತ್ತು ಉಡುಪಿ ಜಿಲ್ಲೆಯ ಫಾತಿಮಾ ರಲಿಯಾ (ಅಕ್ಕರೆಗಾವ ಲಿಂಗ?) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪುರಸ್ಕಾರ ₹5,000 ನಗದು, ಸ್ಮರಣಿಗೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

ಕಥೆಗಾರ ಅಮರೇಶ ನುಗಡೋಣಿ ತೀರ್ಪುಗಾರರಾಗಿದ್ದರು ಎಂದು ಪ್ರಕಾಶನದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.