ವಿಮಾನ
ಹುಬ್ಬಳ್ಳಿ: ವಿಮಾನದ ತುರ್ತು ಸಂದರ್ಭದ ನಿರ್ಗಮನ ಬಾಗಿಲು ತೆರೆದು, ಸಹಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪದ ಮೇಲೆ ಬೆಳಗಾವಿಯ ನಿರಂಜನ ಕರಗಿ ವಿರುದ್ಧ ಇಲ್ಲಿನ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸೆ.12ರಂದು ನಿರಂಜನ ಅವರು ಹುಬ್ಬಳ್ಳಿಯಿಂದ ಪುಣೆಗೆ ಹೊರಡುವ ಇಂಡಿಗೋ ವಿಮಾನ ಹತ್ತಿದ್ದರು. ಆಸನ ಸಂಖ್ಯೆ 2 ಎಫ್‌ನಲ್ಲಿ ಕೂತಿದ್ದ ಅವರು, ಅಲ್ಲೇ ಪಕ್ಕದಲ್ಲಿದ್ದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದರು. ಸಹಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟು ಮಾಡಿದ್ದರು’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.