ADVERTISEMENT

ಹುಬ್ಬಳ್ಳಿ: ಮಿಲಿಟರಿ ಅಧಿಕಾರಿಗಳ ಹೆಸರಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 3:48 IST
Last Updated 2 ಫೆಬ್ರುವರಿ 2022, 3:48 IST

ಹುಬ್ಬಳ್ಳಿ: ವೃತ್ತಿಯಿಂದ ಪೇಂಟರ್‌ ಆಗಿರುವ ಧಾರವಾಡದ ಜಯನಗರದ ಪ್ರೀತಮ್‌ ಎಂಬುವವರಿಗೆ ಮಿಲಿಟರಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಪೇಂಟ್‌ ಹಚ್ಚುವ ಕೆಲಸವಿದೆ ಎಂದು ನಂಬಿಸಿ ಆನ್‌ಲೈನ್‌ ಮೂಲಕ ₹50,288 ವಂಚಿಸಿದ್ದಾನೆ.

ನಾವು ಮಿಲಿಟರಿ ಅಧಿಕಾರಿಗಳಾಗಿದ್ದು ಧಾರವಾಡದಲ್ಲಿ ನಮ್ಮ ಕಚೇರಿಗೆ ಪೇಂಟಿಂಗ್ ಮಾಡಿಸಬೇಕಾಗಿದೆ. ಇದಕ್ಕೆ ಬೇಕಾದ ಸಾಮಗ್ರಿ ನೀಡಿದರೆ ಫೋನ್‌ ಪೇ ಮೂಲಕ ಹಣ ಪಾವತಿಸುವುದಾಗಿ ನಂಬಿಸಿದ್ದಾನೆ. ಮೊದಲು ₹1 ಕಳುಹಿಸುತ್ತೇವೆ ಹಣ ಜಮೆಯಾದರೆ ಬಾಕಿ ಹಣ ಪಾವತಿಸುತ್ತೇನೆ ಎಂದು ಹೇಳಿ; ನೀವು ಸರಿಯಾಗಿ ಕ್ಯು ಆರ್‌ ಕೋಡ್‌ ಸ್ಕ್ಯಾನ್ ಮಾಡಿಲ್ಲ. ಹೀಗಾಗಿ ನಿಮ್ಮ ಖಾತೆಯ ಹಣ ನನ್ನ ಖಾತೆಗೆ ಜಮೆಯಾಗುತ್ತಿದೆ ಎಂದು ನಂಬಿಸಿ ಹಂತಹಂತವಾಗಿ ಆರು ಬಾರಿ ಹಣ ವರ್ಗಾಯಿಸಿಕೊಂಡಿದ್ದಾರೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ: ಸೆಟ್ಲಮೆಂಟ್‌ನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ದಾನಪ್ಪ ಮತ್ತಿಗಟ್ಟಿ ಎನ್ನುವ ವ್ಯಕ್ತಿ ಮೋಟರ್‌ ಸೈಕಲ್‌, ₹24 ಸಾವಿರ ನಗದು, ಮೊಬೈಲ್‌ ಫೋನ್‌ ಹೊಂದಿದ್ದ ಕಾರಣ ವಿಚಾರಿಸಿದಾಗ ಪೊಲೀಸರಿಗೆ ಸರಿಯಾಗಿ ಉತ್ತರ ನೀಡಿಲ್ಲ. ಇವು ಕಳ್ಳತನದ ಮಾಡಿದ ಸಾಮಗ್ರಿಗಳಾಗಿರುಬಹುದು ಎಂದು ಪೊಲೀಸರು ಅಂದಾಜಿಸಿದ್ದು, ಬಂಧಿತ ಹಾಗೂ ಪರಾರಿಯಾದ ಇನ್ನಿಬ್ಬರ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.