ADVERTISEMENT

ವಾಜಪೇಯಿ ಜನ್ಮದಿನ ನಿಮಿತ್ತ ಆರೋಗ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 14:58 IST
Last Updated 30 ಡಿಸೆಂಬರ್ 2019, 14:58 IST
ಜಗದೀಶ ನಗರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದ ಶಿಲ್ಪಾ ಶೆಟ್ಟರ, ತಪಾಸಣೆ ಮಾಡಿಸಿಕೊಂಡವರ ಯೋಗಕ್ಷೇಮ ವಿಚಾರಿಸಿದರು
ಜಗದೀಶ ನಗರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದ ಶಿಲ್ಪಾ ಶೆಟ್ಟರ, ತಪಾಸಣೆ ಮಾಡಿಸಿಕೊಂಡವರ ಯೋಗಕ್ಷೇಮ ವಿಚಾರಿಸಿದರು   

ಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ಹುಬ್ಬಳ್ಳಿಯ ಜಗದೀಶ ನಗರದಲ್ಲಿ ಶಿಕ್ಕಲಗಾರ ಸಮಾಜ ಸೇವಾ ಸಂಘ ಹಾಗೂ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ, ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಸಚಿವ ಜಗದೀಶ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ ಅವರು ಶಿಬಿರವನ್ನು ಉದ್ಘಾಟಿಸಿದರು. ಮುಖಂಡರಾದ ಲಿಂಗರಾಜ ಪಾಟೀಲ, ಲಕ್ಷ್ಮಣ ಬೀಳಗಿ, ರಾಘವೇಂದ್ರ ರಾಮದುರ್ಗ ಇದ್ದರು. ನಾಗೇಶ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.

ಹೆಗ್ಗೇರಿಯ ಸಮುದಾಯ ಆರೋಗ್ಯ ಕೇಂದ್ರ, ಜಿ.ವಿ. ಕಣ್ಣಿನ ಆಸ್ಪತ್ರೆ, ವಿ ಕೇರ್ ಎಲುಬು ಕೀಲು ಆಸ್ಪತ್ರೆ ಹಾಗೂ ಅಶ್ವರಾಜ ಡೆಂಟಲ್ ಕೇರ್ ಆಸ್ಪತ್ರೆಯ ಸಿಬ್ಬಂದಿ, 166 ಜನರ ಆರೋಗ್ಯ ತಪಾಸಣೆ ನಡೆಸಿದರು.

ADVERTISEMENT

ಹರೀಶ್ ಜಂಗಲಿ, ದುರ್ಗಪ್ಪ ಮುದ್ದಿ, ರವಿ ಬಂಕಾಪುರ, ಮುಕುಂದ ಗುಗ್ಗರಿ, ಬಲಭೀಮ ಪೂದ್ದಾರ, ಕಿಶನ್ ಬಿಲಾನಾ ಮಂಜುನಾಥ ಮುದ್ದಿ, ಮಂಜು ಬ್ಯಾಡಗಿ, ಪ್ರಕಾಶ ಬಿಲಾನಾ, ದುರ್ಗಪ್ಪ ವಜ್ಜಣ್ಣವರ, ನಾಗಪ್ಪ ಬಿಲಾನಾ, ಡಾ. ಅರವಿಂದ ಬಿಲಾನಾ, ರುದ್ರಪ್ಪ ಬಡಿಗೇರ, ಯಲ್ಲಪ್ಪ ಭಜಂತ್ರಿ, ಯಲ್ಲಪ್ಪ ಬಾಗಲಕೋಟಿ, ರಾಮು ಸವಣೂರು, ದೀಪಕ ಜಿತೋರಿ, ಶಂಕರ್ ಜಂಗ್ಲಿ, ಲೀಲಾವತಿ ಪಾಸ್ತೆ, ಸಂಗೀತಾ ಬದ್ದಿ, ಅಕ್ಕಮ್ಮದೇವಿ ಬಾಗೇವಾಡಿ, ಶ್ರೀದೇವಿ ಶಿವರುದ್ರಪ್ಪ ಬಡಿಗೇರ, ಯಲ್ಲಮ್ಮ ಮುದ್ದಿ, ಮಂಜುಳಾ ವಜ್ಜಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.