ADVERTISEMENT

ಗದಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸುವ ಸಂಪರ್ಕ ಕ್ರಾಂತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 16:44 IST
Last Updated 10 ಜನವರಿ 2021, 16:44 IST

ಹುಬ್ಬಳ್ಳಿ: ಯಶವಂತಪುರ–ಹಜರತ್‌ ನಿಜಾಮುದ್ದೀನ್‌ ನಡುವೆ ವಾರದಲ್ಲಿ ಐದು ದಿನ ಸಂಚರಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್‌ ಹಬ್ಬದ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇನ್ನು ಮುಂದೆಗದಗ, ಕೊಪ್ಪಳ ಮತ್ತು ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಜ. 11ರಿಂದ 31ರ ತನಕ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರಯಶವಂತಪುರದಿಂದ ಮಧ್ಯಾಹ್ನ 12.45ಕ್ಕೆಹೊರಡುವ ರೈಲು ಎರಡು ದಿನಗಳ ಬಳಿಕ ಬೆಳಿಗ್ಗೆ 8.11ಕ್ಕೆ ಹಜರತ್‌ ನಿಜಾಮುದ್ದೀನ್‌ ತಲುಪಲಿದೆ. ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್‌, ಕರ್ನೂಲ್‌ ಟೌನ್‌ ಮಾರ್ಗದಲ್ಲಿ ಹೋಗಲಿದೆ.

ಜ. 14ರಿಂದ ಫೆ. 3ರ ತನಕ ಪ್ರತಿಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ‌ಶನಿವಾರಹಜರತ್‌ ನಿಜಾಮುದ್ದೀನ್‌ನಿಂದ ಬೆಳಿಗ್ಗೆ 8.20ಕ್ಕೆ ಹೊರಟು ಎರಡು ದಿನಗಳ ಬಳಿಕ ಸಂಜೆ 5.40ಕ್ಕೆ ಯಶವಂತಪುರ ಮುಟ್ಟಲಿದೆ.

ADVERTISEMENT

ರೈಲು ಸಂಚಾರ ರದ್ದು: ಹುಬ್ಬಳ್ಳಿ ಯಾರ್ಡ್‌ನಲ್ಲಿ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಕೆಲ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಜ. 20ರಿಂದ 28ರ ತನಕಹುಬ್ಬಳ್ಳಿ–ಹೈದರಾಬಾದ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು, ಹೈದರಾಬಾದ್‌–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ಜ. 11, ಜ.21ರಿಂದ 29ರ ತನಕ, ಧಾರವಾಡ–ಸೊಲ್ಲಾಪುರ ಪ್ಯಾಸೇಂಜರ್‌ ಜ. 28ರ ವರೆಗೆ ಧಾರವಾಡದಿಂದ, ಜ. 11ರಿಂದ 29ರ ವರೆಗೆ ಸೊಲ್ಲಾಪುರದಿಂದ, ಹುಬ್ಬಳ್ಳಿ–ಸೊಲ್ಲಾಪುರ ಪ್ಯಾಸೆಂಜರ್‌ ಜ. 28ರ ತನಕ ಹುಬ್ಬಳ್ಳಿಯಿಂದ, ಜ. 11ರಿಂದ 29ರ ತನಕ ಸೊಲ್ಲಾಪುರದಿಂದ ಸಂಚಾರ ರದ್ದುಪಡಿಸಲಾಗಿದೆ.

ಮೈಸೂರು–ಧಾರವಾಡ ವಿಶೇಷ ಎಕ್ಸ್‌ಪ್ರೆಸ್‌ ಜ. 22ರಿಂದ 27ರ ತನಕ ಮೈಸೂರಿನಿಂದ, 23ರಿಂದ 28ರ ತನಕ ಧಾರವಾಡದಿಂದ, ಜ. 20ರಿಂದ–29ರ ವರೆಗೆ ವಿಜಯವಾಡ–ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ವಿಜಯವಾಡದಿಂದ, ಜ. 21ರಿಂದ 30ರ ತನಕ ಹುಬ್ಬಳ್ಳಿಯಿಂದ, ಹುಬ್ಬಳ್ಳಿ–ವಾರಣಾಸಿ ಎಕ್ಸ್‌ಪ್ರೆಸ್‌ ಜ. 22ರಂದು, ವಾರಣಾಸಿ–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ಜ. 24ರಂದು ರದ್ದು ಮಾಡಲಾಗಿದೆ.

ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌ ಟರ್ಮಿನಸ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಜ. 20ರಿಂದ 28ರ ತನಕ ಹುಬ್ಬಳ್ಳಿಯಿಂದ, 21ರಿಂದ 29ರ ವರೆಗೆ ಲೋಕಮಾನ್ಯ ತಿಲಕ್‌ ಟರ್ಮಿನಸ್‌ನಿಂದ, ಹಜರತ್‌ ನಿಜಾಮುದ್ದೀನ್‌–ಯಶವಂತಪುರ ಎಕ್ಸ್‌ಪ್ರೆಸ್‌ ಜ. 22ರಿಂದ 27ರ ತನಕ, ಯಶವಂತಪುರದಿಂದ ಹೊರಡುವಾಗ ಜ. 26 ಹಾಗೂ 28ರಂದು ರದ್ದು ಪಡಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.