
ಪ್ರಜಾವಾಣಿ ವಾರ್ತೆ
ಗಾಂಜಾ -ಸಂಗ್ರಹ ಚಿತ್ರ
ಹುಬ್ಬಳ್ಳಿ: ನರಸಾಪೂರ–ಹುಬ್ಬಳ್ಳಿ ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಇರಿಸಲಾಗಿದ್ದ ಚೀಲದಲ್ಲಿ 9.3 ಕೆ.ಜಿ. ಗಾಂಜಾ ಇರುವುದನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಭಾನುವಾರ ಪತ್ತೆ ಮಾಡಿದ್ದಾರೆ.
ರೈಲ್ವೆ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಬಂದಿದ್ದ ಖಚಿತ ಸುಳಿವು ಆಧರಿಸಿ, ಅವರು ಸಿಬ್ಬಂದಿಯೊಂದಿಗೆ ರೈಲ್ವೆ ಬೋಗಿಯಲ್ಲಿ ತಪಾಸಣೆ ಕೈಗೊಂಡಿದ್ದರು. ಆಸನವೊಂದರ ಕೆಳಭಾಗದಲ್ಲಿ ಹೂವಿನ ಘಮ ಹೊರಸೂಸುತ್ತಿದ್ದ ಚೀಲವೊಂದು ಬಿದ್ದಿರುವುದು ಪತ್ತೆಯಾಗಿತ್ತು. ಸಂಶಯದಿಂದ ಅದನ್ನು ತೆಗೆದು ನೋಡಿದಾಗ ಅದರಲ್ಲಿ ಗಾಂಜಾ ಗಿಡಗಳನ್ನು ಟೇಪ್‌ನಿಂದ ಸುತ್ತಿ ಇರಿಸಿರುವುದು ಪತ್ತೆಯಾಗಿದೆ. ಎಲ್ಲ ಗಿಡಗಳನ್ನು ಪ್ರತ್ಯೇಕವಾಗಿ ತೂಕ ಮಾಡಿದ್ದು, ಅಂದಾಜು ₹4.66 ಲಕ್ಷ ಮೌಲ್ಯದ ಗಾಂಜಾ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.