ADVERTISEMENT

ಜಿಪಿಎಲ್‌ ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 14:48 IST
Last Updated 4 ಜನವರಿ 2020, 14:48 IST
ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಹುಬ್ಬಳ್ಳಿಯಲ್ಲಿ ಶನಿವಾರ ಜಿಪಿಎಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪೋಷಾಕು ಅನಾವರಣಗೊಳಿಸಿದರು
ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಹುಬ್ಬಳ್ಳಿಯಲ್ಲಿ ಶನಿವಾರ ಜಿಪಿಎಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪೋಷಾಕು ಅನಾವರಣಗೊಳಿಸಿದರು   

ಹುಬ್ಬಳ್ಳಿ: ಒಂದೂವರೆ ತಿಂಗಳು ನಡೆಯುವ ಜಿಮ್ಖಾನಾ ಪ್ರೀಮಿಯರ್‌ ಲೀಗ್‌ (ಜಿಪಿಎಲ್‌) ಆರನೇ ಆವೃತ್ತಿಯ ಬ್ಯಾಡ್ಮಿಂಟನ್‌ ಟೂರ್ನಿಗೆ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಕೈಲಾಶ ಮುನಾವರ ಶನಿವಾರ ಚಾಲನೆ ನೀಡಿದರು.

ಹುಬ್ಬಳ್ಳಿ ಜಿಮ್ಖಾನಾ ಕ್ಲಬ್‌ ಆಯೋಜಿಸಿರುವ ಟೂರ್ನಿಯಲ್ಲಿ ಮನೀಷ ಮತ್ತು ವಿಮಲ ನೇತೃತ್ವದ ಟಾಪ್‌ಸೀಡ್ ತಂಡ, ಶಂಕರ ಕೋಳಿವಾಡ ಮುಂದಾಳತ್ವದ ಕೋಳಿವಾಡ ರಾಕ್ಸ್‌, ಕೃಷ್ಣ ಉಚ್ಚಿಲ ನೇತೃತ್ವದ ಫೇದರ್ಸ್‌ ಹಾಗೂ ನಂದೀಶ ಕುಲಕರ್ಣಿ ಮುಂದಾಳತ್ವದ ದಿ ಹಾಟ್‌ ಶಾಟ್‌ ತಂಡಗಳು ಪೈಪೋಟಿ ನಡೆಸಲಿವೆ. ಒಟ್ಟು 43 ಆಟಗಾರರು ಪಾಲ್ಗೊಂಡಿದ್ದಾರೆ. ಪ್ರತಿ ವಾರಾಂತ್ಯದ ಎರಡು ದಿನ ಮಾತ್ರ ಪಂದ್ಯಗಳು ನಡೆಯುತ್ತವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ. ಬಸಣ್ಣ, ಕೆ.ಎಸ್‌. ಚೌಟಾ, ಬ್ಯಾಡ್ಮಿಂಟನ್‌ ಆಟಗಾರರಾದ ವಿನಯ ಜವಳಿ, ಶ್ರೀನಿವಾಸ ದೇಸಾಯಿ ಮತ್ತು ವಿಶ್ವನಾಥ ಉಪ್ಪಿನ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಪ್ರದೀಪ ಶೆಟ್ಟರ್ ’ಹಿರಿಯರ ಮಾರ್ಗದರ್ಶನದಿಂದ ಆಗಾಗ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ. ಎಲ್ಲರೂ ಒಂದೆಡೆ ಸೇರಿ ಆಡುವುದರಿಂದ ಪರಸ್ಪರ ಸಂಬಂಧ ಕೂಡ ವೃದ್ಧಿಯಾಗುತ್ತದೆ‘ ಎಂದರು.

ADVERTISEMENT

ಜಿಮ್ಖಾನಾ ಕ್ಲಬ್‌ನ ಕಾರ್ಯದರ್ಶಿ ಜಗದೀಶ ಕಲ್ಯಾಣ ಶೆಟ್ಟರ್, ಕ್ರೀಡಾ ವಿಭಾಗದ ಕಾರ್ಯದರ್ಶಿ ಗಿರೀಶ ವೀಣಾ, ದಿನೇಶ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.