ADVERTISEMENT

ಹುಬ್ಬಳ್ಳಿ ಹಾಫ್ ಮ್ಯಾರಥಾನ್‌ 19ರಂದು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 16:42 IST
Last Updated 16 ನವೆಂಬರ್ 2023, 16:42 IST

ಹುಬ್ಬಳ್ಳಿ: ಹುಬ್ಬಳ್ಳಿ ಫಿಟ್ನೆಸ್ ಕ್ಲಬ್ (ಎಚ್‌ಎಫ್‌ಸಿ) ವತಿಯಿಂದ ನ.19ರಂದು ಬೆಳಿಗ್ಗೆ 5.30ಕ್ಕೆ ಹುಬ್ಬಳ್ಳಿ ಹಾಫ್‌ ಮ್ಯಾರಥಾನ್‌ ಏರ್ಪಡಿಸಲಾಗಿದೆ.

ನಗರದ ಗೋಕುಲ ರಸ್ತೆಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಆವರಣದಿಂದ ಸ್ಪರ್ಧೆ ಆರಂಭವಾಗಲಿದೆ. ಪುರುಷ, ಮಹಿಳೆಯರಿಗೆ ವಿವಿಧ ವಯೋಮಾನದವರ ವಿಭಾಗಗಳಲ್ಲಿ  21.1 ಕಿ.ಮೀ., 15 ಕಿ.ಮೀ, 10 ಕಿ.ಮೀ., 5 ಕಿ.ಮೀ. ಅಂತರದ ಸ್ಪರ್ಧೆಗಳು ನಡೆಯಲಿವೆ.

ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನ ವಿತರಿಸಲಾಗುತ್ತದೆ. 3 ಕಿ.ಮೀ ಅಂತರದ ಸ್ಪರ್ಧೆಗೆ 10 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.