ಕಲಘಟಗಿ: ರಕ್ತದಾನ ಮಾಡುವುದರಿಂದ ಮನುಷ್ಯನ ದೈಹಿಕ ಆರೋಗ್ಯ ವೃದ್ಧಿಗೊಂಡು ನೈತಿಕ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಸಿಪಿಐ ಶ್ರೀಶೈಲ ಕೌಜಲಗಿ ತಿಳಿಸಿದರು.
ಪಟ್ಟಣದ ಗುಡ್ ನ್ಯೂಸ್ ವೇಲ್ಪೆರ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಯುವ ರೆಡ್ ಕ್ರಾಸ್ ಘಟಕ, ಎನ್ಎಸ್ಎಸ್ ಘಟಕ ಮತ್ತು ಪ್ರೇಮ ಬಿಂದು ರಕ್ತ ನಿಧಿ ಕೇಂದ್ರ ಹುಬ್ಬಳ್ಳಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ರಕ್ತದಾನ ಮಾಡಿ ಸಮಾಜದ ವೈದ್ಯರಾಗಿ ಹಾಗೂ ಸೈಬರ್ ವಂಚಕರಿಂದ ಮೋಸಗೊಳ್ಳದೆ ಎಚ್ಚರಗೊಳ್ಳಿರಿ. ದುಶ್ಚಟಗಳಿಗೆ ದಾಸರಾಗಬೇಡಿ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಹಾಕಿಕೊಳ್ಳಿ’ ಎಂದು ಯುವಕರಿಗೆ ಕರೆ ನೀಡಿದರು.
ಡಾ.ವಿ.ಎಂ ಹಿರೇಮಠ ಮತ್ತು ರೋಬಿತ್ ವರ್ಗೀಸ್ ರಕ್ತದಾನ ಅರ್ಹತೆ, ವೈಜ್ಞಾನಿಕ ಪ್ರಕ್ರಿಯೆ ತಿಳಿಸಿ ಜಾಗೃತಿ ಮೂಡಿಸಿದರು. ಗುಡ್ ನ್ಯೂಸ್ ವೆಲ್ಫೇರ್ ಸಂಸ್ಥೆಯ ಕಾರ್ಯದರ್ಶಿ ವರ್ಗೀಸ್ ಕೆ.ಜೆ ಅಧ್ಯಕ್ಷತೆ ವಹಿಸಿದ್ದರು.
ಶಶಿಕುಮಾರ ಕಟ್ಟಿಮನಿ, ಎಂ.ಬಿ.ಉಳ್ಳಾಗಡ್ಡಿ, ಮಹಾಂತೇಶ ನಿಂಬಣ್ಣವರ, ಅಲೆಕ್ಸ್ ಪ್ರಭು, ರೈಮಾನಸಾಬ ಗೋಲಳ್ಳಿ, ಅಕ್ಷತಾ ಕುಬ್ಯಾಳ, ಕುಲಸುಂಬಿ ಶೇಖ್, ಸಂಧ್ಯಾ ಗಾಂವಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.