ADVERTISEMENT

ಉಪ್ಪಿನಬೆಟಗೇರಿ | ಧಾರಾಕಾರ ಮಳೆ: ಸಿಡಿಲು, ಪ್ರವಾಹದ ಆರ್ಭಟ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:42 IST
Last Updated 20 ಮೇ 2025, 15:42 IST
ಚಿತ್ರಾವಳಿ: ಉಪ್ಪಿನಬೆಟಗೇರಿಯ ಕೆಇಬಿ ಕಚೇರಿ ಆವರಣದಲ್ಲಿನ ಮರಕ್ಕೆ ಮಂಗಳವಾರ ಸಿಡಿಲು ಬಡಿದ ಪರಿಣಾಮ ಬಡ್ಡಿಯಿಂದ ಟೊಂಗೆಯವರೆಗೆ ಸೀಳಿದೆ. 
ಚಿತ್ರಾವಳಿ: ಉಪ್ಪಿನಬೆಟಗೇರಿಯ ಕೆಇಬಿ ಕಚೇರಿ ಆವರಣದಲ್ಲಿನ ಮರಕ್ಕೆ ಮಂಗಳವಾರ ಸಿಡಿಲು ಬಡಿದ ಪರಿಣಾಮ ಬಡ್ಡಿಯಿಂದ ಟೊಂಗೆಯವರೆಗೆ ಸೀಳಿದೆ.    

ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಮಿಂಚು, ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು.

ಬೆಳಿಗ್ಗೆಯಿಂದ ತುಂತುರು ಮಳೆಯಾಗುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಸುರಿಯಿತು. ಗ್ರಾಮದ ಕೆಇಬಿ ಕಚೇರಿ ಆವರಣದಲ್ಲಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಬಡ್ಡಿಯಿಂದ ಟೊಂಗೆಯವರೆಗೆ ಮರ ಸೀಳಿದೆ.

ಅಲ್ಲದೇ ಕಲ್ಲೆ ಮತ್ತು ಕಬ್ಬೇನೂರ ಮಾರ್ಗವಾಗಿ ಸವದತ್ತಿ ಹೆದ್ದಾರಿ ಸೇರುವ ರಸ್ತೆಯಲ್ಲಿ ಹೊಲದಲ್ಲಿನ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ಈ ಸ್ಥಳ ಪ್ರವಾಹದಂತಾಗಿತ್ತು. ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಟ್ರ‍್ಯಾಕ್ಟರ್ ಟ್ಯಾಂಕರ್ ನೀರಿನ ರಭಸಕ್ಕೆ ಉರುಳಿ ಬಿದ್ದಿದೆ.

ADVERTISEMENT
ಚಿತ್ರಾವಳಿ: ಧಾರಾಕಾರ ಸುರಿದ ಮಳೆಗೆ ಧಾರವಾಡ ತಾಲ್ಲೂಕಿನ ಕಲ್ಲೆ ಮತ್ತು ಕಬ್ಬೇನೂರ ಮಾರ್ಗದಲ್ಲಿ ನಿರ್ಮಣವಾಗುತ್ತಿರುವ ಸೇತುವೆ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರ‍್ಯಾಕ್ಟರ ಟ್ಯಾಂಕರ್ ನೀರಿನ ರಭಸಕ್ಕೆ ಉರುಳಿ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.