ADVERTISEMENT

ವಚನ ಸಂಪತ್ತು ಉಳಿಸಲು ಶ್ರಮಿಸಿ: ಕಾನೂನು ಸಚಿವ ಎಚ್.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 4:56 IST
Last Updated 25 ಆಗಸ್ಟ್ 2025, 4:56 IST
ಧಾರವಾಡದ ಮುರುಘಾಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು  
ಧಾರವಾಡದ ಮುರುಘಾಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು     

ಧಾರವಾಡ: ‘ಸಮಾಜ ಹಾಗೂ ಜನರ ಅಭ್ಯುದಯಕ್ಕಾಗಿ ನಾಡಿನ ಮಠಗಳು ಶ್ರೇಷ್ಠ ಕೆಲಸವನ್ನೇ ಮಾಡುತ್ತಿವೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ನಗರದ ಮುರುಘಾಮಠದಲ್ಲಿ ಭಾನುವಾರ ನಡೆದ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಭಾರತದ ಅಧ್ಯಾತ್ಮ, ಧಾರ್ಮಿಕತೆ ಕುರಿತು ನಡೆದಷ್ಟು ಚರ್ಚೆ ಬೇರಾವ ದೇಶದ ವಿಚಾರವಾಗಿಯೂ ನಡೆಯಲ್ಲ. ಸಮಾಜ ಸುಧಾರಣೆ ಮಾಡಲು ಮೊದಲು ನಾವು ಸುಧಾರಣೆ ಆಗಬೇಕು. ಎಲ್ಲರೂ ಆಧ್ಯಾತ್ಮಿಕತೆಯತ್ತ ಒಲವು ಬೆಳೆಸಿಕೊಳ್ಳಬೇಕು. ವಚನ ಸಂಪತ್ತು ಉಳಿಸುವ ನಿಟ್ಟಿನಲ್ಲೂ ಕೆಲಸ ಮಾಡಬೇಕು’ ಎಂದರು.

ADVERTISEMENT

ಮನಗುಂಡಿ ಗುರುಬಸವ ಮಹಾಮನೆಯ ಬಸವನಾಂದ ಸ್ವಾಮೀಜಿ ಮಾತನಾಡಿ, ‘ಮಕ್ಕಳಿಗೆ ಹಸಿವು ಹಾಗೂ ಕಷ್ಟದ ಅನುಭವ ಆಗದಿದ್ದರೆ, ಬದುಕಿನ ಸತ್ಯ ಗೊತ್ತಾಗುವುದಿಲ್ಲ. ಜೀವನದ ಸುಖ, ದೈಹಿಕ ಶ್ರಮ ಹಾಗೂ ದುರ್ಗಣ ತ್ಯಾಗದ ಆನಂದ ಕೂಡ ಅನುಭವಿಸುತ್ತಿಲ್ಲ’ ಎಂದರು.

ಹಿರೇಮಾಗಡಿ ವಿರಕ್ತಮಠದ ಚನ್ನಬಸವ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು. ಶರಣ ಚರಿತಾಮೃತ ಪುಸ್ತಕ ಬಿಡುಗಡೆ ಮಾಡಲಾಯಿತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಂಶೋಧಕ ವೀರಣ್ಣ ರಾಜೂರ, ಎಸ್.ಬಿ ಕೋರಿ, ಶಿವಶಂಕರ ಹಂಪಣ್ಣವರ, ನಾಗರಾಜ ಪಟ್ಟಣಶೆಟ್ಟಿ ಇದ್ದರು.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅನುಮಾನಪಟ್ಟವರು ಕಡಿಮೆ. ಕ್ಷೇತ್ರದ ಬಗೆಗಿನ ಆರೋಪ ಸುಳ್ಳು ಎಂಬುದನ್ನು ತಿಳಿದು ಭಕ್ತರಿಗೆ ಸಮಾಧಾನವಾಗಿದೆ
ಎಚ್‌.ಕೆ.ಪಾಟೀಲ ಕಾನೂನು ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.