ADVERTISEMENT

ಹಾಕಿ ಟೂರ್ನಿ: ಇಸ್ಲಾಮಾಪುರ ತಂಡ ಶುಭಾರಂಭ

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 8 ಮೇ 2022, 2:34 IST
Last Updated 8 ಮೇ 2022, 2:34 IST
ಹುಬ್ಬಳ್ಳಿಯ ಗಂಗಾಧರ ನಗರ ಸೆಟ್ಲಮೆಂಟ್‌ನ ಯಂಗ್ ಸ್ಟಾರ್‌ ಕ್ರೀಡಾ ಮೈದಾನದಲ್ಲಿ ಶುಕ್ರವಾರ ನಡೆದ ಅಂತರ ರಾಜ್ಯಮಟ್ಟದ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಶಾಹು ಕೊಲ್ಲಾಪುರ ಹಾಗೂ ಎಸ್‌.ಡಿ. ಪಾಟೀಲ ಇಸ್ಲಾಮಾಪುರದ ತಂಡಗಳ ಆಟದ ವೈಖರಿ
ಹುಬ್ಬಳ್ಳಿಯ ಗಂಗಾಧರ ನಗರ ಸೆಟ್ಲಮೆಂಟ್‌ನ ಯಂಗ್ ಸ್ಟಾರ್‌ ಕ್ರೀಡಾ ಮೈದಾನದಲ್ಲಿ ಶುಕ್ರವಾರ ನಡೆದ ಅಂತರ ರಾಜ್ಯಮಟ್ಟದ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಶಾಹು ಕೊಲ್ಲಾಪುರ ಹಾಗೂ ಎಸ್‌.ಡಿ. ಪಾಟೀಲ ಇಸ್ಲಾಮಾಪುರದ ತಂಡಗಳ ಆಟದ ವೈಖರಿ   

ಹುಬ್ಬಳ್ಳಿ: ಇಲ್ಲಿನ ಗಂಗಾಧರ ನಗರ ಸೆಟ್ಲಮೆಂಟ್‌ನ ಯಂಗ್ ಸ್ಟಾರ್‌ ಕ್ರೀಡಾ ಮೈದಾನದಲ್ಲಿ ಶುಕ್ರವಾರ ಅಂತರ ರಾಜ್ಯಮ
ಟ್ಟದ ಆಹ್ವಾನಿತ ಹಾಕಿ ಟೂರ್ನಿಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

‘ಸೆಟ್ಲಮೆಂಟ್‌ ಎಂದರೆ ನೆನಪಾಗವುದು ಹಾಕಿ. ಇಲ್ಲಿನ ಆಟಗಾರರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಟೂರ್ನಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದ ತಂಡಗಳು ಭಾಗವಹಿಸಿವೆ. ಕ್ರೀಡಾಸ್ಫೂರ್ತಿಯಿಂದ ಆಟವಾಡಿ’ ಎಂದು ಸಲಹೆ ನೀಡಿದರು.

ವೈಎಸ್‌ಎಸ್‌ ಕ್ಲಬ್‌ನ ಅಧ್ಯಕ್ಷ ಯುಮನೂರ ಗುಡಿಹಾಳ, ಕಾರ್ಯದರ್ಶಿ ಚಂದ್ರಶೇಖರ ಗೋಕಾಕ ಹಾಗೂ ಖಜಾಂಜಿ ಪರಶುರಾಮ ಕೊರವಾರ ಉಪಸ್ಥಿತರಿದ್ದರು. ಎಸ್.ಡಿ. ಪಾಟೀಲ ಇಸ್ಲಾಮಾಪುರ ಶುಭಾರಂಭ: ಟೂರ್ನಿಯ ಮೊದಲ ಪಂದ್ಯದಲ್ಲಿ ಶಾಹು ಕೊಲ್ಲಾಪುರ ತಂಡವನ್ನು ಎಸ್‌.ಡಿ. ಪಾಟೀಲ ಇಸ್ಲಾಮಾಪುರ (ಮಹಾರಾಷ್ಟ್ರ) ತಂಡ 4–1 ಅಂತರದಿಂದ ಮಣಿಸಿ, ಶುಭಾರಂಭ ಮಾಡಿತು. ತಂಡದ ಸಚಿನ್ ಭೋಂಸ್ಲೆ ಎರಡು, ಪಂಕಜ್‌ ಪಾಟೀಲ ಹಾಗೂ ಸಚಿನ್‌ ಪಾಟೀಲ ತಲಾ ಒಂದು ಗೋಲ್ ಗಳಿಸಿ ಗೆಲುವಿಗೆ ಕಾರಣರಾದರು. ಶಾಹು ಕೊಲ್ಲಾಪುರ ತಂಡದ ಪ್ರವಣ್ ಸಿ. ಒಂದು ಗೋಲ್ ಗಳಿಸಿದರು.

ADVERTISEMENT

ಡಿವೈಇಎಸ್‌ ಬೆಂಗಳೂರು ಹಾಗೂ ಯಂಗ್ ಸ್ಟಾರ್‌ ಸ್ಪೋರ್ಟ್ಸ್ ಕ್ಲಬ್ ‘ಬಿ’ ತಂಡದ ನಡುವಿನಎರಡನೇ ಪಂದ್ಯದಲ್ಲಿ 9–0 ಅಂತರದಿಂದ ಡಿವೈಇಎಸ್‌ ಬೆಂಗಳೂರು ತಂಡ ಗೆಲುವು ಸಾಧಿಸಿತು. ತಂಡದ ತೇಜು ಆರ್‌–5, ನಿತಿನ್‌ 2, ಸುಕಲ್ಯಾಣ್ ಹಾಗೂ ಪ್ರಜ್ವಲ್‌ ತಲಾ ಒಂದು ಗೋಲ್ ಹೊಡೆದರು.

3ನೇ ಪಂದ್ಯದಲ್ಲಿ ವಾಸು XI ಹುಬ್ಬಳ್ಳಿ ತಂಡದ ವಿರುದ್ಧ ಹನುಮಾನ್ ಬ್ಲೆಸ್ಸಿಂಗ್ ಗದಗ ತಂಡ 3–2 ಅಂತರ ಗೆಲುವು ಸಾಧಿಸಿತು. ತಂಡದ ಹರೀಶ್‌ ಮುತಗಾರ್‌ 2, ವಸಂತ್‌ ಗೊಕಾವಿ ಒಂದು ಗೋಲ್ ಹೊಡೆದರೆ, ವಾಸು XI ಹುಬ್ಬಳ್ಳಿ ತಂಡದ ಅಥರ್ವ ಹಗೂ ಪ್ರಮೋದ್‌ ತಲಾ ಒಂದು ಗೋಲ್ ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.