ವಂಚನೆ
ಹುಬ್ಬಳ್ಳಿ: ಆ್ಯಪ್‌ವೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಹಣ ಗಳಿಸಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ₹28 ಲಕ್ಷ ವಂಚಿಸಲಾಗಿದೆ.
ಧಾರವಾಡದ ನಿವಾಸಿ ನಂದೀಶ ಎಂಬುವರು ಆನ್‌ಲೈನ್‌ನಲ್ಲಿ ಹೂಡಿಕೆಯ ಆ್ಯಪ್ ಗಮನಿಸಿ, ಬ್ಯಾಂಕ್ ಖಾತೆಯಿಂದ ₹30 ಲಕ್ಷ ವರ್ಗಾಯಿಸಿದ್ದಾರೆ. ₹2 ಲಕ್ಷವನ್ನಷ್ಟೇ ಹಿಂದಿರುಗಿಸಿ, ಉಳಿದ ಹಣ ನೀಡದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.