ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ: ಇಲ್ಲಿನ ಅಶೋಕನಗರದ ಉಪ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳಿಬ್ಬರು ಪರಸ್ಪರ ಹಲ್ಲಿನಿಂದ ಕಚ್ಚಿಕೊಂಡು ಗಂಭೀರ ಗಾಯಗೊಂಡ ಪರಿಣಾಮ, ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಾರಣಾಧೀನ ಕೈದಿಗಳಾದ ಶಿವಾನಂದ ಹುಲಜೋಗಿ ಮತ್ತು ಮೈಲಾರಿ ಭರಮಣ್ಣವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಕೈದಿಗಳನ್ನು ಕಾರಾಗೃಹದ ಬ್ಯಾರಕ್ 10ರಲ್ಲಿ ಇರಿಸಲಾಗಿತ್ತು. ಮೇ 1ರಂದು ಶಿವಾನಂದ ಉದ್ದೇಶಪೂರ್ವಕವಾಗಿ, ಮೈಲಾರಿ ಜೊತೆ ತಂಟೆ ತೆಗೆದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲಿನಿಂದ ಬಲಹುಬ್ಬಿಗೆ ಕಚ್ಚಿದ್ದಾನೆ. ಇದರಿಂದ ಕೋಪಗೊಂಡ ಮೈಲಾರಿ, ಅವನಿಗೂ ಕಚ್ಚಿದ್ದಾನೆ. ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾರಾಗೃಹದ ಅಧೀಕ್ಷಕ ಉಳವಪ್ಪ ಹೊಸುರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.