ADVERTISEMENT

ಹುಬ್ಬಳ್ಳಿ–ಮುಂಬೈ ನೇರವಿಮಾನ 19ರಿಂದ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:14 IST
Last Updated 10 ಸೆಪ್ಟೆಂಬರ್ 2020, 16:14 IST

ಹುಬ್ಬಳ್ಳಿ: ಇಂಡಿಗೊ ಸಂಸ್ಥೆ ಮೊದಲ ಬಾರಿಗೆ ಸೆ. 19ರಿಂದ ವಾರದಲ್ಲಿ ಮೂರು ದಿನ ಹುಬ್ಬಳ್ಳಿಯಿಂದ ಮುಂಬೈಗೆ ನೇರ ವಿಮಾನ ಸೌಲಭ್ಯ ಆರಂಭಿಸಲಿದೆ.

ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ 6.35ಕ್ಕೆ ಮುಂಬೈನಿಂದ ಹೊರಡುವ ವಿಮಾನ 8 ಗಂಟೆಗೆ ಹುಬ್ಬಳ್ಳಿ ತಲುಪಲಿದ್ದು, ಇಲ್ಲಿಂದ 8.40ಕ್ಕೆ ಹೊರಟು 10.05ಕ್ಕೆ ಮುಂಬೈಗೆ ಮುಟ್ಟಲಿದೆ.

ಇಂಡಿಗೊ ಈಗಾಗಲೇ ಅಹಮದಾಬಾದ್‌, ಕೇರಳದ ಕಣ್ಣೂರು, ಚೆನ್ನೈ, ಕೊಚ್ಚಿ ಮತ್ತು ಬೆಂಗಳೂರು ನಗರಗಳಿಗೆ ವಿಮಾನ ಸೌಲಭ್ಯಗಳನ್ನು ಹೊಂದಿದ್ದು, ಮುಂಬೈಗೆ ಮೊದಲ ಬಾರಿಗೆ ನೇರವಿಮಾನ ಆರಂಭಿಸಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಇಂಡಿಗೊ ಸಂಸ್ಥೆಯ ಸ್ಥಳೀಯ ಸಿಬ್ಬಂದಿ ಈ ವಿಷಯ ಖಚಿತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.